ಉಡುಪಿ: ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ನೇತೃತ್ವದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಯಶೋದಾ ಆಟೊ ಯೂನಿಯನ್ ವತಿಯಿಂದ ವೈದ್ಯಕೀಯ ಮತ್ತು ಇತರ ತುರ್ತು ಸೇವೆಗಾಗಿ ಉಚಿತ ಆಟೊ ಸೇವೆಯನ್ನು ಉಡುಪಿ ನಗರದಲ್ಲಿ ಆರಂಭಿಸಲಾಗಿದೆ.
ತುರ್ತು ಆರೋಗ್ಯ ಸೇವೆಗಾಗಿ 36 ಆಟೊ ರಿಕ್ಷಾಗಳನ್ನು ಸಿದ್ಧಪಡಿಸಲಾಗಿದೆ. ಈ ಆಟೊ ಸೇವೆ ಈಗಾಗಲೇ ಉಡುಪಿ ನಗರ ಸಭಾವ್ಯಾಪ್ತಿ ಹಾಗೂ ಗ್ರಾಮಾಂತರ ಮಟ್ಟದಲ್ಲಿ ಜನರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡುತ್ತಿವೆ.
ಈ ಉಚಿತ ಆಟೊ ಸೇವೆಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಯಶೋದಾ ಆಟೊ ಚಾಲಕರ ಮತ್ತು ಮಾಲೀಕರ ಸಂಘ ಉಡುಪಿ ಜಿಲ್ಲಾಧ್ಯಕ್ಷ, ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್ ಪುತ್ತೂರು, ಹರೀಶ್, ಪ್ರವೀಣ್, ಕೃಷ್ಣ ಪೆರಂಪಳ್ಳಿ ಮೊದಲಾದವರಿದ್ದರು.