ಉಡುಪಿ: ಯುವ ತುಳುನಾಡ್ ಕುಡ್ಲ ಪದಾಧಿಕಾರಿಗಳು ಭಾನುವಾರ ಇಲ್ಲಿನ ಶ್ರೀಕೃಷ್ಣ ಮಠಕ್ಕೆ ಆಗಮಿಸಿ, ತುಳುವಿಗೆ ಪ್ರೋತ್ಸಾಹ ನೀಡುವಂತೆ ಮನವಿ ಸಲ್ಲಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಡಿ’ಸೋಜ, ಪ್ರಧಾನ ಸಂಘಟನಾ ಮಾರ್ಗದರ್ಶಿ ದಿಲ್ ರಾಜ್ ಆಳ್ವ, ಖಜಾಂಜಿ ರಕ್ಷಣ್ ಪೂಜಾರಿ, ಮಹಿಳಾ ಅಧ್ಯಕ್ಷೆ ದೀಪಿಕಾ ಶೇರಿಗಾರ್, ಸದಸ್ಯರಾದ ಕೌಶಿಕ್ ಶೆಟ್ಟಿ, ಸಚಿನ್ ಶೆಟ್ಟಿ, ಉಡುಪಿ ಪತ್ರಕರ್ತೆ ಯಶೋದಾ ಕೇಶವ್ ಇದ್ದರು.
ಶ್ರೀಪಾದರಿಗೆ ಗೌರವ ಸಮರ್ಪಿಸಿದರು.