ಶಿರ್ವ: ಸುಮಾರು 300 ಮಂದಿ ಬೀದಿಗೆ ಬಿದ್ದ ಅನಾಥರಿಗೆ ಆಶ್ರಯ ನೀಡಿ ರಕ್ಷಿಸುತ್ತಿರುವ ಶಂಕರಪುರ ಇನ್ನಂಜೆ ಗ್ರಾಮದ ವಿಶ್ವಾಸದಮನೆ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಸುಮಾರು 25 ಸಾವಿರ ರೂ. ಮೌಲ್ಯದ ಆಹಾರ ಪಡಿತರ, ತೆಂಗಿನಕಾಯಿ, ತರಕಾರಿ ನೀಡಿತು.
ವೇದಿಕೆ ಅಧ್ಯಕ್ಷ ವಾಲ್ಟರ್ ಸಾಲ್ದಾನ ದಿನಸಿ ಹಸ್ತಾಂತರಿಸಿ, ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಶಂಕರಪುರ ವಿಶ್ವಾಸದಮನೆಗೆ ದಾನಿಗಳ ಕೊರತೆ ಎದುರಾಗಿದ್ದು, ಸಂಸ್ಥೆಯ ಮನವಿ ಮೇರೆಗೆ ಉಡುಪಿ ಜಿಲ್ಲೆಯ ವರ್ತಕರ ಸಹಕಾರದೊಂದಿಗೆ ಆಹಾರ ದಿನಸಿ ಪದಾರ್ಥ ನೀಡಲಾಗಿದೆ ಎಂದರು.
ವಿಶ್ವಾಸದಮನೆ ಮುಖ್ಯಸ್ಥ ಪಾಸ್ಟರ್ ಸುನಿಲ್ ಜಾನ್ ಡಿ’ಸೋಜಾ, ಕೋವಿಡ್ ಸಂಕಷ್ಟ ಕಾಲದಲ್ಲಿ ಸಕಾಲಿಕವಾಗಿ ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ದಿನಸಿ ಪದಾರ್ಥಗಳನ್ನು ಒದಗಿಸಿಕೊಟ್ಟಿದ್ದು, ನಮ್ಮಲ್ಲಿರುವ ನಿರ್ಗತಿಕರ ಆರೈಕೆಗಾಗಿ ಸಹೃದಯಿ ದಾನಿಗಳು ಆಹಾರ ಸಾಮಾಗ್ರಿಗಳನ್ನು ನೀಡಿ ಸಹಕರಿಸಬೇಕು ಎಂದರು.
ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷ ದಿವಾಕರ ಸನಿಲ್, ಡಾಲ್ಫಿ ವಿಕ್ಟರ್ ಲೂಯಿಸ್, ಮ್ಯಾಕ್ಸಿಮ್ ಸಾಲ್ದಾನ, ಆನಂದ ಕಾರ್ನಾಡ್, ಡೊನಾಲ್ಡ್ ಸಾಲ್ದಾನ ಇದ್ದರು