Monday, July 4, 2022
Home ಸಮಾಚಾರ ಸಂಘಸಂಗತಿ ಪತ್ರಿಕಾ ದಿನದ ಗೌರವ ಪ್ರದಾನ

ಪತ್ರಿಕಾ ದಿನದ ಗೌರವ ಪ್ರದಾನ

ಪರ್ಕಳ: ಹಿರಿಯ ಪತ್ರಕರ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಹಿತ ಅನೇಕ ಗೌರವಗಳಿಗೆ ಪಾತ್ರರಾದ ಉದಯವಾಣಿ ವಿಶ್ರಾಂತ ಸಂಪಾದಕ ಎನ್. ಗುರುರಾಜ್ ಅವರಿಗೆ ಬೆಂಗಳೂರಿನ ಪತ್ರಕರ್ತರ ವೇದಿಕೆ ನೀಡುವ 2021ನೇ ಸಾಲಿನ ಪತ್ರಿಕಾ ದಿನದ ಗೌರವವನ್ನು ಇಲ್ಲಿನ ಅವರ ಸ್ವಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಪ್ರದಾನ ಮಾಡಿದರು.

ಮುದ್ರಣ ಮಾಧ್ಯಮ ಇಂದಿಗೂ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ಎನ್. ಗುರುರಾಜ್ ಅವರಂಥ ಅನೇಕ ಹಿರಿಯ ಪತ್ರಕರ್ತರು ಮಾಡಿದ ನಿಸ್ವಾರ್ಥ ಅಪೂರ್ವ ಸೇವೆ ಕಾರಣ ಎಂದು ಪುನರೂರು ಹೇಳಿದರು.

ಪತ್ರಿಕೋದ್ಯಮ ಸಂದಿಗ್ದತೆ ಎದುರಿಸುತ್ತಿದೆ. ಹೀಗೆ ವಿಶ್ರಾಂತರನ್ನು ಗೌರವಿಸುವುದು ಸಂತೋಷದ ವಿಷಯ ಎಂದು ಸನ್ಮಾನ ಸ್ವೀಕರಿಸಿದ ಎನ್. ಗುರುರಾಜ್ ಹೇಳಿದರು.

ವಿಶ್ರಾಂತ ಜೀವನ ನಡೆಸುತ್ತಿರುವ ಸಾಧಕರನ್ನು ಅವರವರ ಮನೆಗೇ ತೆರಳಿ ಗೌರವಿಸುವ ಸಂಪ್ರದಾಯ ವಿನೂತನವಾದುದು. ಕಳೆದ 13 ವರ್ಷದಿಂದ ನಿರಂತರ ಹೀಗೆ ಹಿರಿಯರೆಡೆಗೆ ನಮ್ಮ ನಡಿಗೆ ಮಾಡುತ್ತಿರುವ ಡಾ| ಶೇಖರ ಅಜೆಕಾರು ಕೆಲಸ ಸ್ತುತ್ಯರ್ಹ ಎಂದು ಉಡುಪಿ ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಅಭಿಪ್ರಾಯ ವ್ಯಕ್ತಪಡಿಸಿದರು.

ಪತ್ರಕರ್ತರ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಡಾ| ಶೇಖರ ಅಜೆಕಾರು ಪತ್ರಿಕೆ, ಮಾಧ್ಯಮಗಳನ್ನು ದಮನ ಮಾಡುವ ಸರ್ಕಾಗಳ ನೀತಿ ಖಂಡಿಸಿದರು.

ನಿರ್ಮಲಾ ಗುರುರಾಜ್, ಕಲಾವಿದ ಪಿ. ಎನ್. ಆಚಾರ್ಯ, ಪಂಚನಬೆಟ್ಟು ವಿದ್ಯಾವರ್ಧಕ ಸಂಘ ಅಧ್ಯಕ್ಷ ಎ. ನರಸಿಂಹ ಬೊಮ್ಮರಬೆಟ್ಟು, ವಸಂತರಾಜ್, ಪತ್ರಕರ್ತ ದೇವರಾಯ ಪ್ರಭು, ಛಾಯಾಗ್ರಾಹಕ ಸಂತೋಷ ಜೈನ್ ಈದು ಅತಿಥಿಗಳಾಗಿದ್ದರು.

ಹಿರಿಯ ಪತ್ರಕರ್ತ ಪದ್ಮಾಕರ ಭಟ್ ಈದು ಪ್ರಸ್ತಾವಿಕ ಮಾತುಗಳನ್ನಾಡಿದರು. ಸಂಘಟಕ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ನಿರೂಪಿಸಿದರು. ಸಾಹಿತ್ಯ ಸೇವಕ ನರಸಿಂಹಮೂರ್ತಿ ರಾವ್ ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!