Saturday, July 2, 2022
Home ಸಮಾಚಾರ ಸಂಘಸಂಗತಿ ಪರಿಹಾರ ಸಾಮಗ್ರಿ ವಿತರಣೆ

ಪರಿಹಾರ ಸಾಮಗ್ರಿ ವಿತರಣೆ

ಉಡುಪಿ: ಭಾರತೀಯ ರೆಡ್ ಕ್ರಾಸ್ ಉಡುಪಿ ಜಿಲ್ಲಾ ಘಟಕ ವತಿಯಿಂದ ಕಡೆಕಾರು ಪರಿಸರದ ನೆರೆ ಸಂತ್ರಸ್ತ ಫಲಾನುಭವಿಗಳಿಗೆ ಪರಿಹಾರ ಸಾಮಾಗ್ರಿಗಳ ಕಿಟ್ ಗಳನ್ನು ಈಚೆಗೆ ರೆಡ್ ಕ್ರಾಸ್ ಭವನದಲ್ಲಿ ವಿತರಿಸಲಾಯಿತು.
ಕಿಟ್ ವಿತರಿಸಿದ ರೆಡ್ ಕ್ರಾಸ್ ಉಡುಪಿ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅಂತಾರಾಷ್ಟ್ರೀಯ ಸೇವಾಸಂಸ್ಥೆಯಾಗಿದ್ದು, ಸಾಧ್ಯವಾದಷ್ಟು ಜನಸಾಮಾನ್ಯರಿಗೆ ಬೇಕಾಗುವ ಸೇವೆ ನೀಡಲಾಗುತ್ತಿದೆ ಎಂದರು.

ಸಂಸ್ಥೆ ಗೌರವ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ, ಗೌರವ ಖಚಾಂಚಿ ಡಾ. ಅರವಿಂದ ನಾಯಕ್ ಅಮ್ಮುಂಜೆ, ಡಿಡಿಆರ್.ಸಿ ನೋಡಲ್ ಅಧಿಕಾರಿ ಅನುಷಾ ಆಚಾರ್ಯ, ಸುನೀತಾ ಮೊದಲಾದವರಿದ್ದರು.

ಈ ಸಂದರ್ಭದಲ್ಲಿ 10 ಮಂದಿ ಫಲಾನುಭವಿಗಳಿಗೆ ಕಿಚನ್ ಸೆಟ್, ಫೇಸ್ ಮಾಸ್ಕ್ ಮತ್ತು ಸೋಪು ವಿತರಿಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!