ಉಡುಪಿ: ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ಈಚೆಗೆ ಆಹಾರ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷ ಪುರಂದರ್ ಕೋಟ್ಯಾನ್, ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಸದಸ್ಯರಾದ ಶಂಕರ್ ಸಾಲಿಯಾನ್, ಸೌಮ್ಯ ಶೆಟ್ಟಿ, ಉಷಾ ಪೂಜಾರಿ ಮತ್ತು ಜಯ ನಾಯಕ್ ಹಾಗೂ ಪಕ್ಷ ಪ್ರಮುಖರಾದ ಪ್ರಸಾದ್ ಹೆಗ್ಡೆ, ಅರುಣ್ ಕುಮಾರ್ ಹೆಗ್ಡೆ, ಶಿಲ್ಪಾ ಸಾಲಿಯಾನ್, ಶೇಖರ್ ಆಚಾರ್, ಸುನಿಲ್ ಶೆಟ್ಟಿ ಮೊದಲಾದವರಿದ್ದರು.