Thursday, July 7, 2022
Home ಸಮಾಚಾರ ಸಂಘಸಂಗತಿ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದ ಸೆಲ್ಕೋ ಸೋಲಾರ್

ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಮೂಡಿಸಿದ ಸೆಲ್ಕೋ ಸೋಲಾರ್

ಉಡುಪಿ: ಮನೆಯಲ್ಲಿ ವಿದ್ಯುತ್ ಇಲ್ಲದೆ ಕ್ಯಾಂಡಲ್, ಮೊಬೈಲ್ ಟಾರ್ಚ್ ಹಿಡಿದು ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿರುವ ಮನೆಗೆ ಸೆಲ್ಕೋ ಸೋಲಾರ್ ಸಂಸ್ಥೆ ಉಚಿತವಾಗಿ ಸೋಲಾರ್ ಬೆಳಕಿನ ವ್ಯವಸ್ಥೆ ಮಾಡುವ ಮೂಲಕ ವಿದ್ಯಾರ್ಥಿಗಳ ಓದಿಗೆ ನೆರವಾಗಿದೆ.

ಉಡುಪಿ ಜಿಲ್ಲೆಯ ಉಪ್ಪುಂದ ಅರೆಕಲ್ಲು ಮನೆ, ಮಡಿಕಲ್ ರಸ್ತೆ ನಿವಾಸಿ ಗುಲಾಬಿ ಪೂಜಾರಿ ನಿವಾಸಕ್ಕೆ ಎಷ್ಟು ಪ್ರಯತ್ನಿಸಿದರೂ ದಾಖಲೆ ಸಮಸ್ಯೆಯಿಂದಾಗಿ ವಿದ್ಯುತ್ ಸಂಪರ್ಕ ಲಭಿಸಿರಲಿಲ್ಲ. ಪತಿ, ಪತ್ನಿ ಕಷ್ಟಪಟ್ಟು ದುಡಿದು ಬದುಕು ಸಾಗಿಸುತ್ತಿದ್ದಾರೆ. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ವಿದ್ಯುತ್ ಇಲ್ಲದೆ ಕ್ಯಾಂಡಲ್, ಮೊಬೈಲ್ ಟಾರ್ಚ್ ಹಿಡಿದು ಕಷ್ಟಪಟ್ಟು ಓದುವ ದಯನೀಯ ಸ್ಥಿತಿ!

ಈ ವಿದ್ಯಾರ್ಥಿನಿಯರು ಓದಿಗಾಗಿ ಅನುಭವಿಸುತ್ತಿರುವ ಬವಣೆ ಸೆಲ್ಕೋ ಸೋಲಾರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಹೆಗಡೆ ಅವರ ಗಮನಕ್ಕೆ ಬರುತ್ತಿದ್ದಂತೆಯೇ ಕಂಪೆನಿಯ ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶನಿವಾರ ಸೆಲ್ಕೋ ಸೋಲಾರ್ ಡಿಜಿಎಂ ಗುರುಪ್ರಕಾಶ ಶೆಟ್ಟಿ, ವಲಯ ವ್ಯವಸ್ಥಾಪಕ ಶೇಖರ ಶೆಟ್ಟಿ, ಕುಂದಾಪುರ ವ್ಯವಸ್ಥಾಪಕ ಮಂಜುನಾಥ್ ನಿವಾಸದಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಿ ದೀಪ ಬೆಳಗಿಸಿದ್ದಾರೆ.

ಸೆಲ್ಕೋ ಸೋಲಾರ್ ಉಚಿತವಾಗಿ ವಿದ್ಯುದ್ದೀಪ ಅಳವಡಿಸಿಕೊಟ್ಟ ಬಗ್ಗೆ ಗುಲಾಬಿ ಪೂಜಾರಿ ಕುಟುಂಬದವರು ಸೆಲ್ಕೋ ಸೋಲಾರ್ ಸಂಸ್ಥೆ ಮುಖ್ಯಸ್ಥ ಡಾ| ಹರೀಶ್ ಹಂದೆ, ಸಿಇಓ ಮೋಹನ ಹೆಗಡೆ, ಜಗದೀಶ್ ಪೈ, ಗುರುಪ್ರಕಾಶ್ ಶೆಟ್ಟಿ ಹಾಗೂ ಸ್ಥಳೀಯ ಕುಂದಾಪುರ ಶಾಖೆಯ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!