ಉಡುಪಿ: ಕಳೆದ ವರ್ಷ ನಿಧನರಾದ ಬಡಗತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್ ಪತ್ನಿ ಸರಸ್ವತಿ ಆಚಾರ್ ಅವರಿಗೆ ಇಲ್ಲಿನ ಯಕ್ಷಗಾನ ಕಲಾರಂಗ ವತಿಯಿಂದ 25 ಸಾವಿರ ರೂ. ನೆರವು ನೀಡಲಾಯಿತು.
ನೇಜಾರಿನಲ್ಲಿರುವ ಅವರ ಮನೆಗೆ ತೆರಳಿ ಅಧ್ಯಕ್ಷ ಎಂ. ಗಂಗಾಧರ ರಾವ್ ಹಸ್ತಾಂತರಿಸಿದರು. ಅವರ ಪುತ್ರಿ ಸೀಮಾಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಭರಿಸಲಿದೆ.
ಇದೇ ಸಂದರ್ಭದಲ್ಲಿ ಸೆಲ್ಕೋ ಸಂಸ್ಥೆಯ ವತಿಯಿಂದ ಸೆಲ್ಕೋ ಸೋಲಾರ್ ಹೊಲಿಗೆ ಯಂತ್ರವನ್ನು ಸಂಸ್ಥೆಯ ಎ.ಜಿ.ಎಂ. ಗುರುಪ್ರಕಾಶ್ ಶೆಟ್ಟಿ ಹಸ್ತಾಂತರಿಸಿದರು.
ಕಲಾರಂಗ ಉಪಾಧ್ಯಕ್ಷ ಎಸ್. ವಿ. ಭಟ್, ಕಾರ್ಯದರ್ಶಿ ಮುರಲಿ ಕಡೆಕಾರ್, ಜೊತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಮತ್ತು ಎಚ್. ಎನ್. ವೆಂಕಟೇಶ್ ಇದ್ದರು