Monday, July 4, 2022
Home ಸಮಾಚಾರ ಸಂಘಸಂಗತಿ ರಕ್ತದಾನ ಶಿಬಿರ ಆಯೋಜನೆ ಮೂಲಕ ವಾರ್ಷಿಕೋತ್ಸವ ಆಚರಣೆ

ರಕ್ತದಾನ ಶಿಬಿರ ಆಯೋಜನೆ ಮೂಲಕ ವಾರ್ಷಿಕೋತ್ಸವ ಆಚರಣೆ

ಉಡುಪಿ: ಆರೋಗ್ಯ ಸೇವೆಯೊಂದಿಗೆ ಸಾಕಷ್ಟು ಸಮಾಜಮುಖಿ ಕಾರ್ಯ ನಡೆಸುತ್ತಿರುವ ಇಲ್ಲಿನ ಗಾಂಧಿ ಆಸ್ಪತ್ರೆ 27ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ರಕ್ತದಾನ ಶಿಬಿರ ಸಂಘಟಿಸುವ ಮೂಲಕ ತನ್ನ ವಾರ್ಷಿಕೋತ್ಸವ ಆಚರಿಸಿಕೊಂಡ ಮಾದರಿ ಕಾರ್ಯ ಈಚೆಗೆ ನಡೆಯಿತು. ಆಸ್ಪತ್ರೆ ವರ್ಷಕ್ಕೆ ಎರಡು ಬಾರಿ ರಕ್ತದಾನ ಶಿಬಿರ ಆಯೋಜಿಸುತ್ತಿರುವುದು ಗಮನೀಯ.

ಆಸ್ಪತ್ರೆಯಲ್ಲಿ ಕಳೆದ 17 ವರ್ಷದಿಂದ ಸುಮಾರು 35ಕ್ಕೂ ಅಧಿಕ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಕೋವಿಡ್ ಸಂದರ್ಭದಲ್ಲಿ ಸಂಭವಿಸುವ ರಕ್ತದ ಕೊರತೆಯನ್ನು ಗಮನಿಸಿ, ಅದನ್ನು ನೀಗಿಸುವಲ್ಲಿ ಈ ಶಿಬಿರ ಬಹಳ ಮಖ್ಯ ಪಾತ್ರ ವಹಿಸಿದ್ದು, ಅನೇಕ ಮಂದಿಯ ಪ್ರಾಣ ರಕ್ಷಣೆಯಲ್ಲಿ ಸಹಕಾರಿಯಾಗಿದೆ.

ಶಿಬಿರದ ಅಭ್ಯಾಗತರಾಗಿ ಆಗಮಿಸಿದ್ದ ಉಡುಪಿ ಐಎಂಎ ಅಧ್ಯ್ಕಕ್ಷ ಡಾ. ಉಮೇಶ ಪ್ರಭು, ಆರೋಗ್ಯ ಸೇವೆಯೊಂದಿಗೆ ಸಮಾಜಮುಖಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿರುವ ಆಸ್ಪತ್ರೆಯ ಕಾರ್ಯ ಶ್ಲಾಘನೀಯ ಎಂದರು.

ಉಡುಪಿ ಜಿಲ್ಲಾ ರಕ್ತನಿಧಿ ಕೇಂದ್ರ ವೈದ್ಯಾಧಿಕಾರಿ ಡಾ. ವೀಣಾ ಕುಮಾರಿ ಇದ್ದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಎ. ಪ್ರಸ್ತಾವಿಕವಾಗಿ ಮಾತನಾಡಿ, ಇಂದಿನ ಆರೋಗ್ಯ ಸೇವೆಯಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಹೆಚ್ಚಿನ ಒತ್ತಡವಿದ್ದು ಸಾರ್ವಜನಿಕರ ಸಹಕಾರ ಮತ್ತು ಕೋವಿಡ್ ಮಾರ್ಗಸೂಚಿಯ ಪಾಲನೆ ಅತ್ಯಗತ್ಯ ಎಂದರು.

ಆಸ್ಪತ್ರೆ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರ ವಂದಿಸಿದರು. ಪಂಚಮಿ ಟ್ರಸ್ಟ್ ವಿಶ್ವಸ್ಥೆ ಲಕ್ಷ್ಮೀ ಹರಿಶ್ಚಂದ್ರ, ಡಾ. ವಿದ್ಯಾ ತಂತ್ರಿ ಮತ್ತು ಆಸ್ಪತ್ರೆಯ ಫ್ರಂಟ್ ಲೈನ್ ವಾರಿಯರ್ಸ್ ಹಾಗೂ ರಕ್ತದಾನಿ ರಾಘವೇಂದ್ರ ಪ್ರಭು ಕರ್ವಾಲು ಇದ್ದರು. ಯೂಸುಫ್ ಖಾದರ್ ನಿರೂಪಿಸಿದರು.

ಸುಮಾರು 100 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ಸಂಸ್ಥೆ ಉದ್ಯೋಗಿಗಳಿಂದಲೇ ಉದ್ಘಾಟನೆ
ಕೊರೊನಾ ದಿನಗಳಲ್ಲಿ ವೈದ್ಯರಿಂದ ತೊಡಗಿ ಎಲ್ಲಾ ವರ್ಗದ ವಿವಿಧ ವಿಭಾಗಗಳ ಸಿಬ್ಬಂದಿಗಳು ಕೊರೊನಾ ಪೀಡಿತರ ಅವಿರತ ಸೇವೆಯಲ್ಲಿದ್ದು ಅವರ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಸಿಬ್ಬಂದಿ ವರ್ಗದವರಿಂದಲೇ ದೀಪ ಬೆಳಗುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಪಿಪಿಇ ಕಿಟ್ ಧರಿಸಿದ ಕೊರೊನಾ ವಾರಿಯರ್ಸ್ ಶಿಬಿರ ಉದ್ಘಾಟಿಸಿರುವುದು ಆಸ್ಪತ್ರೆ ನಿರ್ದೇಶಕ ಎಂ. ಹರಿಶ್ಚಂದ್ರ ಪ್ರೇರಣೆಗೆ ಸಾಕ್ಷಿ.

ಸ್ವತಃ ಎಂಡಿಯಿಂದಲೇ ರಕ್ತದಾನ
ಕೇವಲ ರಕ್ತದಾನ ಶಿಬಿರ ಸಂಘಟಿಸಿ, ರಕ್ತದಾನಿಗಳಿಂದ ರಕ್ತ ಸಂಗ್ರಹಿಸುವುದಕ್ಕಷ್ಟೆ ಸೀಮಿತಗೊಳ್ಳದೇ ಗಾಂಧಿ ಆಸ್ಪತ್ರೆ ನಿರ್ದೇಶಕ, ಸಮಾಜ ಕಳಕಳಿಯ ಮೃದುಮನದ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರ ಅವರೂ ರಕ್ತದಾನ ಮಾಡುವ ಮೂಲಕ ರಕ್ತದಾನಿಗಳಿಗೆ ಪ್ರೇರಣೆಯಾದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!