ಮಣಿಪಾಲ: ಕೊರೊನಾ ಕಾರಣದಿಂದಾಗಿ ಸಂಭವಿಸಿರುವ ರಕ್ತ ಕೊರತೆ ನೀಗಿಸುವ ಯತ್ನವಾಗಿ ಅಲೆವೂರು ನೆಹರು ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೊಸಿಯೇಶನ್ ಹಾಗೂ ಕಾಂಗ್ರೆಸ್ ಕುಟುಂಬ ಅಲೆವೂರು ಸಂಯುಕ್ತಾಶ್ರಯದಲ್ಲಿ ಇಲ್ಲಿನ ಕೆಎಂಸಿ ರಕ್ತನಿಧಿಯಲ್ಲಿ ಭಾನುವಾರ ರಕ್ತದಾನ ಶಿಬಿರ ಆಯೋಜಿಸಲಾಯಿತು.
ಕೆಪಿಸಿಸಿ ಸಂಯೋಜಕ ಅಲೆವೂರು ಹರೀಶ್ ಕಿಣಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗ್ರಾಮ ಪಂಚಾಯತ್ ಸದಸ್ಯ ಶಬರೀಶ್ ಸುವರ್ಣ, ನೆಹರು ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಸಿಯೇಶನ್ ಅಧ್ಯಕ್ಷ, ಗ್ರಾಮ ಪಂಚಾಯತ್ ಸದಸ್ಯ ಗುರುರಾಜ ಸಾಮಗ, ಸದಸ್ಯರಾದ ರವಿರಾಜ್ ಬದರಿ, ಶ್ರೀಧರ ಪೂಜಾರಿ, ಶರಣ್ ಉಪ್ಪಾರ್, ರಾಘವೇಂದ್ರ ನಾಯಕ್, ಪ್ರಶಾಂತ ಭಟ್, ನಾಗರಾಜ್, ಮಾಲ, ಸುರೇಶ್ ನಾಯಕ್ ಮೊದಲಾದವರಿದ್ದರು