Thursday, July 7, 2022
Home ಸಮಾಚಾರ ಸಂಘಸಂಗತಿ ಹಿರಿಯಡ್ಕದಲ್ಲಿ ರಕ್ತದಾನ ಶಿಬಿರ

ಹಿರಿಯಡ್ಕದಲ್ಲಿ ರಕ್ತದಾನ ಶಿಬಿರ

ಉಡುಪಿ: ಹಿಂದೂ ಯುವಸೇನೆ ಹಿರಿಯಡ್ಕ ನೇತೃತ್ವದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಜಿಲ್ಲಾಸ್ಪತ್ರೆ ರಕ್ತನಿಧಿ ಸಹಯೋಗದೊಂದಿಗೆ ಈಚೆಗೆ ಹಿರಿಯಡ್ಕ ಪ್ರಾಥಮಿಕ ಶಾಲಾ ವಠಾರದಲ್ಲಿ ರಕ್ತದಾನ ಶಿಬಿರ ನಡೆಯಿತು.
ಸುಮಾರು 100ಕ್ಕೂ ಹೆಚ್ಚು ಮಂದಿ ರಕ್ತದಾನಿಗಳು ಭಾಗವಹಿಸಿದ್ದರು.

ಶಿಬಿರವನ್ನು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಕಾಪು ಶಾಸಕ ಲಾಲಾಜಿ ಮೆಂಡನ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ಸಂಯುಕ್ತವಾಗಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷ ಮಂಜು ಕೊಳ, ಹಿಂದೂ ಯುವಸೇನೆ ಹಿರಿಯಡ್ಕ ಅಧ್ಯಕ್ಷ ಶೇಖರ ಶೆಟ್ಟಿ ಹಿರಿಯಡ್ಕ, ಕಾಪು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ತಾಲೂಕು ಕಾರ್ಯವಾಹ ಮಂಜುನಾಥ ಭಟ್, ಹಿರಿಯಡ್ಕ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸಂದೀಪ್ ಶೆಟ್ಟಿ ಬಡಗುಬೆಟ್ಟು, ಉಡುಪಿ ಜಿಲ್ಲಾ ಯುವಮೋರ್ಚಾ ಕೋಶಾಧಿಕಾರಿ ಯತೀಶ್ ಮಟ್ಟು, ಉಪಾಧ್ಯಕ್ಷ ವಿಜೇತ ಕುಮಾರ್, ಜಾಗರಣ ವೇದಿಕೆ ಮಂಗಳೂರು ಪ್ರಭಾರಿ ಪ್ರಕಾಶ್ ಕುಕ್ಕೆಹಳ್ಳಿ, ಮಹೇಶ್ ಬೈಲೂರು, ಹಿಂದೂ ಯುವಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಹಿರಿಯಡ್ಕ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಸುನಿತಾ ನಾಯ್ಕ್, ಬೊಮ್ಮಾರಬೆಟ್ಟು ಪಂಚಾಯತ್ ಮಾಜಿ ಉಪಾಧ್ಯಕ್ಷ ಹರೀಶ್ ಸಾಲ್ಯಾನ್, ಪಂಚಾಯತ್ ಸದಸ್ಯರಾದ ಸುನಿಲ್ ಶೆಟ್ಟಿ, ವಿನಯ್ ಕುಮಾರ್ ಅಂಜಾರು, ಸಂದೀಪ್ ಮಡಿವಾಳ ಓಂತಿಬೆಟ್ಟು ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!