Saturday, July 2, 2022
Home ಸಮಾಚಾರ ಸಂಘಸಂಗತಿ ರಕ್ಷಣಾ ಸಾಮಾಗ್ರಿ ವಿತರಣೆ

ರಕ್ಷಣಾ ಸಾಮಾಗ್ರಿ ವಿತರಣೆ

ಉಡುಪಿ: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಾದ ಮಳೆ, ಪ್ರವಾಹ, ವಾಯುಭಾರ ಕುಸಿತ, ಭೂಕಂಪ, ನೆರೆಹಾವಳಿ, ಕಟ್ಟಡ ಕುಸಿತ ಇತ್ಯಾದಿಗಳಿಂದಾಗುವ ಅನಾಹುತಗಳ ಬಗ್ಗೆ ಮುಂಜಾಗ್ರತಾ ಕ್ರಮ ಮತ್ತು ರಕ್ಷಣಾ ಕೆಲಸ ನಿರ್ವಹಿಸಲು ಹಾಗೂ ಈ ಸಂದರ್ಭದಲ್ಲಿ ತುರ್ತು ಸ್ಥಳಕ್ಕೆ ಹೋಗಬೇಕಾಗಿರುವ ಕಂದಾಯ ಇಲಾಖೆಯ ಎಲ್ಲಾ 7 ತಾಲೂಕು ತಹಶೀಲ್ದಾರು, ರಾಜಸ್ವ ನಿರೀಕ್ಷಕರು, ಗ್ರಾಮಕರಣಿಕರು ಹಾಗೂ ಗ್ರಾಮ ಸಹಾಯಕರಿಗೆ ಅತೀ ಆವಶ್ಯಕತೆ ಇರುವ ಉತ್ತಮ ಗುಣಮಟ್ಟದ ಒಟ್ಟು 315 ರೈನ್ ಕೋಟ್, ಟಾರ್ಚ್ ಗಳಂಥ ತುರ್ತು ಆವಶ್ಯಕ ರಕ್ಷಣಾ ಸಾಮಾಗ್ರಿಗಳನ್ನು ಜಿಲ್ಲಾಧಿಕಾರಿ ಜಿ. ಜಗದೀಶ್ ವಿತರಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಇದ್ದರು.

ಸಾಂಕೇತಿಕವಾಗಿ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ಸಾಮಾಗ್ರಿ ಸ್ವೀಕರಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!