Sunday, October 2, 2022
Home ಸಮಾಚಾರ ಸಂಘಸಂಗತಿ ರೆಡ್ ಕ್ರಾಸ್ ಗೆ ದೇಣಿಗೆ

ರೆಡ್ ಕ್ರಾಸ್ ಗೆ ದೇಣಿಗೆ

ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಶಾಖೆಯ ಸಮಾಜಸೇವಾ ಕಾರ್ಯಗಳಿಗಾಗಿ ಇಲ್ಲಿನ ಕಾಡಬೆಟ್ಟು ನಿವಾಸಿ, ಪ್ರಸ್ತುತ ಅಮೆರಿಕಾದ ಚಿಕಾಗೊ ನಗರದಲ್ಲಿ ನೆಲೆಸಿರುವ ಡಾ. ಅಜಿತ್ ಕ್ಯಾಸ್ತಲಿನೊ 2 ಲಕ್ಷ ರೂ. ಕೊಡುಗೆಯಾಗಿ ನೀಡಿದ್ದಾರೆ.

ದೇಣಿಗೆ ಚೆಕ್ ನ್ನು ಅವರ ಸಹೋದರ ಆಲ್ವಿನ್ ಕ್ಯಾಸ್ತಲಿನೊ ಅವರು ಸಂಸ್ಥೆ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ. ಜಿ., ಗೌರವ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ, ಗೌರವ ಖಜಾಂಚಿ ಡಾ. ಅರವಿಂದ ನಾಯಕ್ ಅಮ್ಮುಂಜೆ, ಡಿ.ಡಿ.ಆರ್.ಸಿ ಕಾರ್ಯದರ್ಶಿ ಕೆ. ಸನ್ಮತ್ ಹೆಗ್ಡೆ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!