Monday, July 4, 2022
Home ಸಮಾಚಾರ ಸಂಘಸಂಗತಿ ರೆಡ್ ಕ್ರಾಸ್ ವತಿಯಿಂದ ಕಿಟ್ ವಿತರಣೆ

ರೆಡ್ ಕ್ರಾಸ್ ವತಿಯಿಂದ ಕಿಟ್ ವಿತರಣೆ

ರೆಡ್ ಕ್ರಾಸ್ ವತಿಯಿಂದ ಕಿಟ್ ವಿತರಣೆ
ಉಡುಪಿ: ಈಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಘಟಕ ವತಿಯಿಂದ ಪೆರಂಪಳ್ಳಿ ನವಚೈತನ್ಯ ಯುವಕ ಮಂಡಳಿ ಸಹಯೋಗದೊಂದಿಗೆ ಆಯ್ದ ಫಲಾನುಭವಿಗಳಿಗೆ ಪರಿಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.

ರೆಡ್ ಕ್ರಾಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ ಸಾಂಕೇತಿಕವಾಗಿ ವಿತರಿಸಿ, ರೆಡ್ ಕ್ರಾಸ್ ಸಂಸ್ಥೆ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ನೊಂದವರು, ದೀನದಲಿತರ ಸೇವೆಗೆ ಮುಡಿಪಾಗಿದೆ ಎಂದರು.

ಸಂಸ್ಥೆ ಉಪಸಭಾಪತಿ ಡಾ. ಅಶೋಕ್ ಕುಮಾರ್ ವೈ. ಜಿ., ಗೌರವ ಕಾರ್ಯದರ್ಶಿ ಕೆ. ಜಯರಾಮ ಅಚಾರ್ಯ ಸಾಲಿಗ್ರಾಮ ಇದ್ದರು.

ನವಚೈತನ್ಯ ಯುವಕ ಮಂಡಲ ಅಧ್ಯಕ್ಷ ಕೀರ್ತನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಂಕರ್ ಸ್ವಾಗತಿಸಿ, ನಿರೂಪಿಸಿದರು.

ಭಾರತೀಯ ರೆಡ್ ಕ್ರಾಸ್ ನ ಸುನೀತಾ ಹಾಗೂ ಜಿಲ್ಲಾ ವಿಶೇಷ ಚೇತನರ ಪುನರ್ವಸತಿ ಕೇಂದ್ರ ಸಿಬಂದಿ ಅನುಷಾ ಇದ್ದರು.

ಪೆರಂಪಳ್ಳಿಯಲ್ಲಿ ಆಯ್ದ 55 ಮಂದಿ ಫಲಾನುಭವಿಗಳಿಗೆ ಅಡುಗೆ ಸಾಮಗ್ರಿ, ಹೊದಿಕೆ, ಸೀರೆ, ಟರ್ಪಲಿನ್, ಮಾಸ್ಕ್ ಮತ್ತು ಸೋಪು ಇತ್ಯಾದಿಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!