Thursday, July 7, 2022
Home ಸಮಾಚಾರ ಸಂಘಸಂಗತಿ ಪೊಲೀಸ್ ಸಿಬಂದಿಗೆ ರೈನ್ ಕೋಟ್ ಕೊಡುಗೆ

ಪೊಲೀಸ್ ಸಿಬಂದಿಗೆ ರೈನ್ ಕೋಟ್ ಕೊಡುಗೆ

ಮಂಗಳೂರು: ಕೋವಿಡ್ ವಾರಿಯರ್ ಗಳಾಗಿ ಸೇವೆ ಸಲ್ಲಿಸುತ್ತಿರುವ ಬಂದರು ಉತ್ತರ ಪೊಲೀಸ್ ಠಾಣಾ ಸಿಬ್ಬಂದಿಗಳಿಗೆ ಕೆಎನ್.ಎಸ್.ಬಿ ಫಲ್ಗುಣಿ ಟೆಕ್ಸ್ ಟೈಲ್ಸ್ ಮತ್ತು ಮಹಾಲಕ್ಷ್ಮೀ ಜ್ಯುವೆಲ್ಲರ್ಸ್ ವತಿಯಿಂದ ರೈನ್ ಕೋಟ್ ವಿತರಿಸಲಾಗಿದ್ದು, ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಪೋಲಿಸ್ ಇಲಾಖೆ ಜನರ ಸುರಕ್ಷತೆಗಾಗಿ ಹಗಲಿರುಳು ಶ್ರಮಿಸುತ್ತಿದೆ. ಕೋವಿಡ್ ವಾರಿಯರ್ ಗಳಾಗಿ ದುಡಿಯುತ್ತಿರುವ ಅವರಿಗೆ ನಾವೆಲ್ಲರೂ ಧೈರ್ಯ ತುಂಬಬೇಕಿದೆ. ಆ ನಿಟ್ಟಿನಲ್ಲಿ ಮಹಾಲಕ್ಷ್ಮಿ ಜ್ಯುವೆಲ್ಲರ್ಸ್ ಹಾಗೂ ಕೆ.ಎನ್.ಎಸ್.ಬಿ ಫಲ್ಗುಣಿ ಟೆಕ್ಸ್ ಟೈಲ್ಸ್ ನವರ ಕೊಡುಗೆ ಶ್ಲಾಘನೀಯ ಎಂದರು.

ಮನಪಾ ಸದಸ್ಯೆ ಪೂರ್ಣಿಮಾ, ಸೆಂಟ್ರಲ್ ಉಪ ವಿಭಾಗದ ಎಸಿಪಿ ಪಿ. ಎ. ಹೆಗಡೆ, ಬಂದರು ಠಾಣಾ ಇನ್ಸ್ ಪೆಕ್ಟರ್ ಗೋವಿಂದರಾಜು ಪಿ., ಮಹಾಲಕ್ಷ್ಮೀ ಜ್ಯುವೆಲ್ಲರ್ಸ್ ನ ರವೀಂದ್ರ ಎಂ. ನಿಕಮ್, ಕೆ.ಎನ್.ಎಸ್.ಬಿ ಫಲ್ಗುಣಿ ಟೆಕ್ಸ್ ಟೈಲ್ಸ್ ನ ಮನೋಜ್ ಕುಮಾರ್, ದೇವಿಚರಣ್ ಶೆಟ್ಟಿ, ರಮೇಶ್ ಹೆಗ್ಡೆ, ಮುರಳೀಧರ್ ನಾಯಕ್, ಗಿರೀಶ್ ಕುಮಾರ್, ಗಣೇಶ್ ನಾಯಕ್ ಮತ್ತು ಪ್ರಮೋದ್ ಆಚಾರ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!