Thursday, July 7, 2022
Home ಸಮಾಚಾರ ಸಂಘಸಂಗತಿ ಅಂಬೇಡ್ಕರ್ ಯುವಸೇನೆಯಿಂದ ಲಸಿಕೆ ಅಭಿಯಾನ

ಅಂಬೇಡ್ಕರ್ ಯುವಸೇನೆಯಿಂದ ಲಸಿಕೆ ಅಭಿಯಾನ

ಅಂಬೇಡ್ಕರ್ ಯುವಸೇನೆಯಿಂದ ಲಸಿಕೆ ಅಭಿಯಾನ

(ಸುದ್ದಿಕಿರಣ ವರದಿ)
ಉಡುಪಿ: ಕೊರೊನಾ ವೈರಸ್ ನಿಯಂತ್ರಣಕ್ಕೆ ಅಂಬೇಡ್ಕರ್ ಯುವಸೇನೆ ಸಾಮಾಜಿಕ ಜವಾಬ್ದಾರಿಯುತ ಸಂಘಟನೆಯಾಗಿ ಎಲ್ಲಾ ವರ್ಗದ ಜನರಿಗೆ ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಲಸಿಕೆ ಅಭಿಯಾನವನ್ನು ಮಂಗಳವಾರ ಆರಂಭಿಸಿತು.

ಮಲ್ಪೆ ಗಾಂಧಿ ಶತಾಬ್ದಿ ಆಂಗ್ಲಮಾಧ್ಯಮ ಶಾಲೆ ವಠಾರದಲ್ಲಿ ನಡೆದ ಅಭಿಯಾನಕ್ಕೆ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಅವರಿಗೆ ಲಸಿಕೆ ನೀಡುವ ಮೂಲಕ ಚಾಲನೆ ನೀಡಲಾಯಿತು.

ಅಂಬೇಡ್ಕರ್ ಯುವಸೇನೆ ಮನವಿ ಮೇರೆಗೆ ಜಿಲ್ಲಾ ವೈದ್ಯಾಧಿಕಾರಿ ಮಲ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ ಆಶ್ರಯದಲ್ಲಿ ಸುಮಾರು 400ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಗಣೇಶ್ ನೆರ್ಗಿ, ಭಗವಾನ್ ಮಲ್ಪೆ, ಸುಮಿತ್ ನೆರ್ಗಿ, ಕೃಷ್ಣ ಶ್ರೀಯಾನ್, ಪ್ರಸಾದ್ ಮಲ್ಪೆ, ಗುಣವಂತ ಬಿ. ಎನ್., ಪ್ರಶಾಂತ್, ರಾಮೋಜಿ ಅಮೀನ್ ಬಲರಾಮನಗರ, ನಗರಸಭಾ ಸದಸ್ಯ ಯೋಗೀಶ್ ಸಾಲ್ಯಾನ್, ಮಲ್ಪೆ ವೈದ್ಯಾಧಿಕಾರಿ ಡಾ. ಜೇಶ್ಮಾ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!