Sunday, July 3, 2022
Home ಸಮಾಚಾರ ಸಂಘಸಂಗತಿ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ

ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ

ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಕಿಟ್ ವಿತರಣೆ

(ಸುದ್ದಿಕಿರಣ ವರದಿ)
ಉಡುಪಿ: ಇಲ್ಲಿನ ಯಕ್ಷಗಾನ ಕಲಾರಂಗದ ಆಯ್ದ 574 ಮಂದಿ ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಗಿವ್ ಇಂಡಿಯಾ ಸಂಸ್ಥೆ ನೀಡಿದ ತಲಾ 1,000 ರೂ. ಮೌಲ್ಯದ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.

ಸಂಸ್ಥೆ ಕಚೇರಿಯಲ್ಲಿ ವಿದ್ಯಾಪೋಷಕ್ ದಾನಿಗಳಾದ ಎ. ಮುರಾರಿ ರಾವ್ ಹಾಗೂ ಚಂದ್ರಕಲಾ ರಾವ್ ದಂಪತಿ ಸಾಂಕೇತಿಕವಾಗಿ ವಿತರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆ ಉಪಾಧ್ಯಕ್ಷ ಎಸ್. ವಿ. ಭಟ್, ಕೋಶಾಧಿಕಾರಿ ಪ್ರೊ. ಸದಾಶಿವ ರಾವ್, ಜೊತೆ ಕಾರ್ಯದರ್ಶಿಗಳಾದ ಪ್ರೊ. ನಾರಾಯಣ ಎಂ. ಹೆಗಡೆ ಮತ್ತು ಎಚ್. ಎನ್. ಶೃಂಗೇಶ್ವರ, ಸಕ್ರಿಯ ಕಾರ್ಯಕರ್ತರಾದ ಎ. ನಟರಾಜ ಉಪಾಧ್ಯ, ದಿನೇಶ್ ಪೂಜಾರಿ, ಅಶೋಕ್ ಎಂ, ಮಂಜುನಾಥ ಇದ್ದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ, ನಿರೂಪಿಸಿದರು.

ಫಲಾನುಭವಿಗಳಿಗೆ ಅನುಕೂಲವಾಗುವಂತೆ ಭಾನುವಾರ ಗಣೇಶ್ ರಾವ್ ಎಲ್ಲೂರು ನೇತೃತ್ವದಲ್ಲಿ ಕಟಪಾಡಿ, ಪಡುಬಿದ್ರೆ, ಬೆಳ್ಮಣ್, ಕಾರ್ಕಳ, ಹೆಬ್ರಿ, ಪೆರ್ಡೂರು ಮಾರ್ಗವಾಗಿ, ಮಂಜುನಾಥ ನೇತೃತ್ವದಲ್ಲಿ ಚೇರ್ಕಾಡಿ, ಕೊಕ್ಕರ್ಣೆ, ಹಾಲಾಡಿ, ಸಾಬ್ರಕಟ್ಟೆ, ಬಾರ್ಕೂರು ಮಾರ್ಗವಾಗಿ ಹಾಗೂ ಅಶೋಕ್ ಎಂ. ನೇತೃತ್ವದಲ್ಲಿ ಬ್ರಹ್ಮಾವರ, ಸಾಲಿಗ್ರಾಮ, ಕೋಟೇಶ್ವರ, ಕುಂದಾಪುರ, ಹೆಮ್ಮಾಡಿ, ನಾವುಂದ, ಬೈಂದೂರು ಕೊಲ್ಲೂರು, ವಂಡ್ಸೆ ಮಾರ್ಗವಾಗಿ ಮೂರು ವಾಹನಗಳಲ್ಲಿ ತೆರಳಿ ಕಿಟ್ ವಿತರಿಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!