Monday, July 4, 2022
Home ಸಮಾಚಾರ ಸಂಘಸಂಗತಿ ವಿಶ್ವ ವೈದ್ಯರ ದಿನಾಚರಣೆ

ವಿಶ್ವ ವೈದ್ಯರ ದಿನಾಚರಣೆ

ಉಡುಪಿ: ಇನ್ನರ್ ವ್ಹೀಲ್ ಕ್ಲಬ್ ಉಡುಪಿ ಆಶ್ರಯದಲ್ಲಿ ಗುರುವಾರ ವಿಶ್ವ ವೈದ್ಯರ ದಿನಾಚರಣೆ ಮಾಡಲಾಯಿತು.

ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಸಮಾಜದ ಈರ್ವರು ವೈದ್ಯರನ್ನು ಅವರ ಕಾರ್ಯಕ್ಷೇತ್ರದಲ್ಲಿಯೇ ಸಂಮಾನಿಸಿ ಗೌರವಿಸಲಾಯಿತು.

ಖ್ಯಾತ ಎಲುಬು ಮತ್ತು ಕೀಲು ತಜ್ಞ, ಆ್ಯಮ್ ಕೇರ್ ಸೆಂಟರ್ ಮೂಲಕ ಜನರ ನೋವು ನಿವಾರಿಸಿ ಸೂಕ್ತ ಶುಶ್ರೂಷೆ ನೀಡುತ್ತಿರುವ ಡಾ. ಸುರೇಶ್ ಶೆಣೈ ಮತ್ತು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ರೋಗಿಗಳ ಆರೈಕೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಡಾ. ಸ್ಮಿತಾ ರಜನೀಶ ಅವರನ್ನು ಸಂಮಾನಪತ್ರದೊಂದಿಗೆ ಗೌರವಿಸಲಾಯಿತು.

ಇನ್ನರ್ ವ್ಹೀಲ್ ಅಧ್ಯಕ್ಷೆ ಶುಭಾ ಎಸ್. ಬಾಸ್ರಿ ಸನ್ಮಾನಿಸಿದರು. ಕಾರ್ಯದರ್ಶಿ ಶಾಲಿನಿ ರಾಘವೇಂದ್ರ ವಂದಿಸಿದರು.

ನಿಕಟಪೂರ್ವ ಅಧ್ಯಕ್ಷೆ ಮಾಲತಿ ತಂತ್ರಿ ಹಾಗೂ ಪದಾಧಿಕಾರಿಗಳಾದ ವಿದ್ಯಾ ಶೆಣೈ ಮತ್ತು ಶೈಲಾ ಮಯ್ಯ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!