Saturday, July 2, 2022
Home ಸಮಾಚಾರ ಸಂಘಸಂಗತಿ ವೈದ್ಯಕೀಯ ಪರಿಕರ ಹಸ್ತಾಂತರ

ವೈದ್ಯಕೀಯ ಪರಿಕರ ಹಸ್ತಾಂತರ

ಉಡುಪಿ: ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಜಿಲ್ಲೆ ಹಾಗೂ ಸುವಡಿಜಿಓ ಎಂಟರ್ ಪ್ರೈಸಸ್ ಬ್ರಹ್ಮಾವರ ವತಿಯಿಂದ ಕೊರೊನಾ ಸೋಂಕಿತರಿಗೆ ನೆರವಾಗುವ ದೃಷ್ಟಿಯಿಂದ ಜಿಲ್ಲಾಡಳಿತಕ್ಕೆ ಸುಮಾರು 50 ಸಾವಿರ ರೂ. ಮೌಲ್ಯದ ಪ್ರೋಟೀ ಪೌಡರ್, ಪಿಪಿಇ ಕಿಟ್, ಮಾಸ್ಕ್ ಇತ್ಯಾದಿಗಳನ್ನು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಹಾಯಕ ಔಷಧ ನಿಯಂತ್ರಕ ನಾಗರಾಜ್, ಸುವರ್ಣ ಎಂಟರ್ ಪೈಸಸ್ ನ ಮಧುಸೂದನ ಹೇರೂರು, ಸುನೀತಾ ಮಧುಸೂದನ್, ವೈದ್ಯಕೀಯ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕಾರಂತ್, ಪದಾಧಿಕಾರಿಗಳಾದ ಪ್ರಕಾಶ್ ಆಚಾರ್ಯ, ಶ್ರೀನಾಥ ಕೋಟ, ಅನಂತ ಹೊಳ್ಳ, ದೇವೇಂದ್ರ ಶ್ರೀಯಾನ್, ಚೇತನ್ ಪುತ್ರನ್, ಚಂದ್ರಶೇಖರ್ ಆಚಾರ್, ಸುಧೀರ್ ಶೇಟ್, ರಾಘವೇಂದ್ರ ಪ್ರಭು ಕರ್ವಾಲು ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!