Wednesday, July 6, 2022
Home ಸಮಾಚಾರ ಸಂಘಸಂಗತಿ ನಾಗರಿಕ ಸಮಿತಿಯಿಂದ ಶವಗಳ ಅಂತ್ಯಸಂಸ್ಕಾರ

ನಾಗರಿಕ ಸಮಿತಿಯಿಂದ ಶವಗಳ ಅಂತ್ಯಸಂಸ್ಕಾರ

ಉಡುಪಿ: ಕೊರೊನಾದಿಂದ ಮೃತಪಟ್ಟಿರುವರ ಶವಗಳ ಅಂತ್ಯಸಂಸ್ಕಾರ ನಡೆಸಲು ಸಂಬಂಧಿಕರಿಗೆ ಅಸಹಾಯಕತೆ ಎದುರಾದಾಗ ಇಲ್ಲಿನ ಜಿಲ್ಲಾ ನಾಗರಿಕ ಸಮಿತಿ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಮತ್ತು ತಾರಾನಾಥ ಮೇಸ್ತ ಶಿರೂರು ಕಾನೂನು ಪ್ರಕ್ರಿಯೆ ಬಳಿಕ ಪೋಲಿಸ್ ಇಲಾಖೆ ಪ್ರತಿನಿಧಿ ಹಾಗೂ ನಗರಸಭೆ ಪ್ರತಿನಿಧಿಗಳ ಸಮಕ್ಷಮದಲ್ಲಿ ಗೌರವಯುತವಾಗಿ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಶನಿವಾರ ನಡೆಸಿದರು.

ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದ ಸದಸ್ಯರಾದ ಚರಣ್ ರಾಜ್ ಬಂಗೇರ, ಸೌರಭ್ ಬಲ್ಲಾಳ್, ಶರತ್ ಶೆಟ್ಟಿ, ಸಜ್ಜನ್ ಶೆಟ್ಟಿ ಭಾಗವಹಿಸಿದ್ದರು. ಸುಶೀಲಾ ರಾವ್ ಉಡುಪಿ, ಅಣ್ಣಪ್ಪ ಪೂಜಾರಿ ಕರಂಬಳ್ಳಿ ಸಹಕರಿಸಿದರು.

ಕುಕ್ಕಿಕಟ್ಟೆ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ನಿವೃತ್ತ ಶಿಕ್ಷಕಿಯೋರ್ವರು ಅಸೌಖ್ಯದಿಂದ ಮನೆಯಲ್ಲಿ ಮೃತಪಟ್ಟಿದ್ದರು ಹಾಗೂ ಕಾಪು ಹೋಟೆಲ್ ಉದ್ಯೋಗಿ ಅಸೌಖ್ಯದಿಂದ ನಗರದ ಅಂಗಡಿಯೊಂದರ ಜಗಲಿಯಲ್ಲಿ ಮೃತಪಟ್ಟಿದ್ದರು.

ಎರಡೂ ಶವಗಳನ್ನು ನಾಗರಿಕ ಸಮಿತಿ ಕಾರ್ಯಕರ್ತರು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಶವಗಳ ಗಂಟಲು ದ್ರವ ಪರೀಕ್ಷೆಗೊಳಪಡಿಸಿದಾಗ ಮೃತರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿತು.

ಎರಡೂ ಶವಗಳನ್ನು ಸಂಬಂಧಿಕರ ಬರುವಿಕೆಗಾಗಿ ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ರಕ್ಷಿಸಿಡಲಾಗಿತ್ತಾದರೂ ಪೂರಕ ಸ್ಪಂದನೆ ಲಭಿಸದ ಹಿನ್ನೆಲೆಯಲ್ಲಿ ಸಮಿತಿ ಅಂತ್ಯಸಂಸ್ಕಾರ ನಡೆಸಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!