ಉಡುಪಿ: ದೈವ ನರ್ತಕರು, ಸಹಾಯಕರು ಮತ್ತು ಸೇವಕರ ಕುಟುಂಬಕ್ಕೆ ಹಸ್ತಪ್ರದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಹಾರ ದಿನಸಿ ಕಿಟ್ ವಿತರಿಸಲಾಯಿತು.
ಕೊರೊನಾದಿಂದಾಗಿ ತುಳುನಾಡಿನ ಪ್ರಮುಖ ಸಂಪ್ರದಾಯವಾದ ಭೂತರಾಧನೆ ನಡೆಯುತ್ತಿಲ್ಲ. ಎಲ್ಲಿಯೂ ದೈವಾರಾಧನೆ ನಡೆಯುತ್ತಿಲ್ಲ.
ಈ ಹಿನ್ನೆಲೆಯಲ್ಲಿ ದೈವ ನರ್ತನ ಕಾರ್ಯ ಮಾಡುವ ಹಾಗೂ ದೈವದ ಚಾಕರಿ ಮಾಡುವ ಹಿರಿಯಡ್ಕ ಪರಿಸರದ ಸುಮಾರು 20 ಕುಟುಂಬಗಳಿಗೆ ತಲಾ 10 ಕೆಜಿ ಅಕ್ಕಿ ಹಾಗೂ ಒಂದು ಸಾವಿರ ರೂ. ಮೌಲ್ಯದ ಅಗತ್ಯ ದಿನಸಿ ಸಾಮಗ್ರಿ ನೀಡಲಾಯಿತು.
ಟ್ರ್ರಸ್ಟ್ ಅಧ್ಯಕ್ಷ ಅನಂತ ಇನ್ನಂಜೆ ಆಹಾರ ಕಿಟ್ ವಿತರಿಸಿದರು.
ಟ್ರಸ್ಟ್ ಕಾರ್ಯದರ್ಶಿಗಳಾದ ಅನಿಲ್ ಆಚಾರ್ಯ ಓಂತಿಬೆಟ್ಟು, ಪುನೀತ್ ಕುಲಾಲ್ ಮಜೂರು, ವಿಕಾಸ್ ದೇವಾಡಿಗ ಮಜೂರು, ಶಿವು ಮಜೂರು ಮೊದಲಾದವರಿದ್ದರು.