Thursday, July 7, 2022
Home ಸಮಾಚಾರ ಸಂಘಸಂಗತಿ ಹೂಡೆ: ಮನೆ ಹಸ್ತಾಂತರ

ಹೂಡೆ: ಮನೆ ಹಸ್ತಾಂತರ

ಉಡುಪಿ: ಸೂರಿಲ್ಲದ ಕುಟುಂಬಗಳಿಗೆ ದಾನಿಗಳ ನೆರವಿನಿಂದ ಸೂರು ಒದಗಿಸುವ ಕಾರ್ಯಕ್ರಮದಡಿ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಅರ್ಥಿಕವಾಗಿ ಹಿಂದುಳಿದ ಜಫ್ರು ಸಾಹೇಬ್ ಎಂಬವವರಿಗೆ ಮನೆ ಹಸ್ತಾಂತರಿಸಲಾಯಿತು.

ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಶಬ್ಬೀರ್ ಮಲ್ಪೆ ಮನೆ ಮಾಲಿಕ ಜಫ್ರು ಸಾಹೇಬ್ ಅವರಿಗೆ ಕೀಲಿಗೈ ನೀಡಿ, ಶುಭ ಹಾರೈಸಿದರು.

ಸಂಘಟನೆ ವತಿಯಿಂದ ಜಾತಿ ಮತ ಧರ್ಮದ ಭೇದವಿಲ್ಲದೆ ಹಸ್ತಾಂತರಿಸಲ್ಪಡುತ್ತಿರುವ 26ನೇ ಮನೆ ಇದಾಗಿದ್ದು, ದಾನಿಗಳ ಸಹಾಯದೊಂದಿಗೆ ಈ ಕಾರ್ಯ ನೆರವೇರಿಸಲಾಗುತ್ತಿದೆ. ಜೊತೆಗೆ ಸಂಘಟನೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಪ್ರಮುಖವಾಗಿ ತನ್ನ ಅಂಗಸಂಸ್ಥೆ ಎಚ್.ಆರ್.ಎಸ್ ಮೂಲಕ ಕೋವಿಡ್ ಸಂದರ್ಭದಲ್ಲಿ ಜನಸೇವೆಯಲ್ಲಿ ತೊಡಗಿಕೊಂಡು ಸಾವಿರಾರು ಮಂದಿಗೆ ರೇಶನ್ ಕಿಟ್, ಆಕ್ಸಿಜನ್ ವ್ಯವಸ್ಥೆ ಇನ್ನಿತರ ಸಹಾಯ ಮಾಡಿರುವುದಾಗಿ ಇದ್ರಿಸ್ ಹೂಡೆ ತಿಳಿಸಿದರು.

ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್, ಮಹೇಶ್ ಹೂಡೆ, ಎಚ್.ಆರ್.ಎಸ್. ಹೂಡೆ ಮುಂದಾಳು ಝೈನುಲ್ಲಾ, ವೆಲ್ಫೇರ್ ಪಾರ್ಟಿ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ರಝಾಕ್ ನಕ್ವಾ, ಮೌಲಾನ ತಾರೀಖ್, ಎಸ್.ಐ.ಓ.ನ ಅಫ್ವಾನ್ ಹೂಡೆ ಮೊದಲಾದವರಿದ್ದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!