Saturday, July 2, 2022
Home ಸಮಾಚಾರ ಸಂಘಸಂಗತಿ ಸಾಸ್ತಾನ ಕೆಥೊಲಿಕ್ ಸಭಾ ಅಧ್ಯಕ್ಷೆಯಾಗಿ ಸಿಂತಿಯಾ ಪುನರಾಯ್ಕೆ

ಸಾಸ್ತಾನ ಕೆಥೊಲಿಕ್ ಸಭಾ ಅಧ್ಯಕ್ಷೆಯಾಗಿ ಸಿಂತಿಯಾ ಪುನರಾಯ್ಕೆ

ಬ್ರಹ್ಮಾವರ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಸಂತ ಅಂತೋನಿ ದೇವಾಲಯ ಸಾಸ್ತಾನ ಘಟಕದ 2021- 22ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಸಿಂತಿಯಾ ಡಿ’ಸೋಜಾ ಪುನರಾಯ್ಕೆಯಾಗಿದ್ದಾರೆ.
ಭಾನುವಾರ ಚರ್ಚ್ ಸಭಾಂಗಣದಲ್ಲಿ ನಡೆದ ನೂತನ ಪದಾಧಿಕಾರಿಗಳ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.

ಇತರ ಪದಾಧಿಕಾರಿಗಳಾಗಿ ಆಧ್ಯಾತ್ಮಿಕ ನಿರ್ದೇಶಕ- ವಂ| ಜಾನ್ ವಾಲ್ಟರ್ ಮೆಂಡೊನ್ಸಾ, ನಿಯೋಜಿತ ಅಧ್ಯಕ್ಷ ಐವನ್ ಡಿ’ಆಲ್ಮೆಡ, ಉಪಾಧ್ಯಕ್ಷ- ಮೈಕಲ್ ರೊಡ್ರಿಗಸ್, ಕಾರ್ಯದರ್ಶಿ- ಜಾನೆಟ್ ಬಾಂಜ್, ಸಹಕಾರ್ಯದರ್ಶಿ- ಜೆನವಿವ್ ಡಿ’ಸೋಜಾ, ಕೋಶಾಧಿಕಾರಿ- ಲೂಯಿಸ್ ಮ್ಯಾಕ್ಷಿಮ್ ಡಿ’ಸೋಜಾ, ಸಹ ಕೋಶಾಧಿಕಾರಿ- ಸುಜಾನ್ನಾ ಅಲ್ಮೆಡಾ, ಆಮ್ಚೊ ಸಂದೇಶ್ ಪತ್ರಿಕೆ ಪ್ರತಿನಿಧಿ- ವೀರಾ ಪಿಂಟೊ, ರಾಜಕೀಯ ಸಂಚಾಲಕಿ- ಶೈಲಾ ಸಲ್ಡಾನಾ, ಸರ್ಕಾರಿ ಸವಲತ್ತುಗಳ ಪ್ರತಿನಿಧಿ- ಮಾಲಾ ಲೂವಿಸ್, ಆಂತರಿಕ ಲೆಕ್ಕಪರಿಶೋಧಕಿ- ಶರ್ಮಿಳಾ ಡಿ’ಸೋಜಾ ಆಯ್ಕೆಯಾದರು.

ಇತರ ಸಮಿತಿ ಸದಸ್ಯರಾಗಿ ಜೆಸಿಂತಾ ಸೆರಾವೊ, ವಲೇರಿಯನ್ ಅಲ್ಮೆಡ, ಜೋಸೆಫ್ ಡಿ’ಸೋಜಾ, ಜೋಸೆಫ್ ಬಾಂಜ್ ಮತ್ತು ವಿನ್ನಿಫ್ರೆಡ್ ಸೆರಾವೊ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಎಲಿಯಾಸ್ ಡಿ’ಸೋಜಾ ಸಂತೆಕಟ್ಟೆ ಮತ್ತು ವೀಕ್ಷಕರಾಗಿ ಜ್ಯೋತಿ ಲೂವಿಸ್ ಸಂತೆಕಟ್ಟೆ ಸಹಕರಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!