Sunday, July 3, 2022
Home ಸಮಾಚಾರ ಸಂಘಸಂಗತಿ ಚಟುವಟಿಕೆಯಿಂದ ರಂಗಭೂಮಿ ಅಸ್ತಿತ್ವ

ಚಟುವಟಿಕೆಯಿಂದ ರಂಗಭೂಮಿ ಅಸ್ತಿತ್ವ

ಉಡುಪಿ: ಸಮಾಜದಲ್ಲಿ ಕ್ರಾಂತಿ, ಸಂಘರ್ಷ ಮತ್ತು ಹೊಸತನ ಬಂದಾಗಲೆಲ್ಲಾ ಜನರ ಮೇಲೆ ಅತ್ಯಂತ ಪ್ರಭಾವ ಬೀರಿರುವ ರಂಗಭೂಮಿ, ಚಟುವಟಿಕೆ ಮೂಲಕ ಅಸ್ತಿತ್ವ ಉಳಿಸಿಕೊಂಡಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಮಾನ ಮನಸ್ಸಿನ ವ್ಯಕ್ತಿಗಳು ಬೇಕು ಎಂದು ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಬೈಂದೂರು ಶಾರದಾ ವೇದಿಕೆಯಲ್ಲಿ ಈಚೆಗೆ ಕರ್ನಾಟಕ ಜಾನಪದ ಪರಿಷತ್ತು ಉಡುಪಿ ಜಿಲ್ಲಾ ಘಟಕ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ ನಡೆದ ಲಾವಣ್ಯ ರಂಗ ವೈವಿಧ್ಯ ಸಮಾಪನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೋಟರಿ ಕ್ಲಬ್ ಕಾರ್ಯದರ್ಶಿ ಗೋವಿಂದ ಎಂ. ಶುಭಾಶಂಸನೆಗೈದರು.

ಸಂಸ್ಥೆ ಗೌರವಾಧ್ಯಕ್ಷ ಯು. ಶ್ರೀನಿವಾಸ ಪ್ರಭು, ಕಾರ್ಯದರ್ಶಿ ಮೂರ್ತಿ ಬೈಂದೂರು, ಪ್ರಾಂಶುಪಾಲ ಡಾ| ರಘು ನಾಯ್ಕ್, ಉದ್ಯಮಿ ಪ್ರಶಾಂತ ಪೂಜಾರಿ, ಕಜಾಪ ಉಡುಪಿ ಜಿಲ್ಲಾ ಘಟಕ ಸಂಚಾಲಕ ಗೋಪಾಲ ಬಂಗೇರ, ಖಜಾಂಚಿ ಜಯರಾಮ ಆಚಾರ್ಯ, ಬೈಂದೂರು ಘಟಕ ಅಧ್ಯಕ್ಷ ಗಿರೀಶ್ ಬೈಂದೂರು ಇದ್ದರು.

ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿರಾಜ್ ನಾಯಕ್ ಪ್ರಸ್ತಾವನೆಗೈದರು. ಲಾವಣ್ಯ ಅಧ್ಯಕ್ಷ ಹರೇಗೋಡು ಉದಯ ಸ್ವಾಗತಿಸಿ, ಸದಸ್ಯ ರಾಜೇಶ್ ನಾಯ್ಕ್ ಪರಿಚಯಿಸಿದರು. ಜೊತೆ ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ವಂದಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಯೋಧ ಬೈಂದೂರು ಚಂದ್ರಶೇಖರ ನಾವಡ ಅವರನ್ನು ಸನ್ಮಾನಿಸಲಾಯಿತು.

ಕೋಲಾಟ, ಜಡೆಕೋಲಾಟ, ವೀರಗಾಸೆ, ಧೀಂಸಾಲ್, ಗೋಂದಲು ಕುಣಿತ, ಭಜನಾ ಕುಣಿತ ಪ್ರದರ್ಶನ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!