Monday, July 4, 2022
Home ಸಮಾಚಾರ ಸಂಘಸಂಗತಿ ದಲಿತರ ಮನೆಗೆ ಬೆಳಕಾದ ಉಡುಪಿ ತಹಶೀಲ್ದಾರ್

ದಲಿತರ ಮನೆಗೆ ಬೆಳಕಾದ ಉಡುಪಿ ತಹಶೀಲ್ದಾರ್

ಉಡುಪಿ: ವಿದ್ಯುತ್ ಸಂಪರ್ಕ ಇಲ್ಲದ ದಲಿತರ ಮನೆಯೊಂದಕ್ಕೆ ತನ್ನ ಪುತ್ರಿಯ ಹುಟ್ಟುಹಬ್ಬದಂದು ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್ ದಲಿತರ ಮನೆ ಬೆಳಗಿದ್ದಾರೆ.

ನಗರದ ಗೋಪಾಲಪುರ ವಾರ್ಡ್ ಕಲ್ಯಾಣಪುರ ಸಂತೆಕಟ್ಟೆ ಬಳಿಯ ನಿವಾಸಿ ಗಿರಿಜಾಬಾಯಿ ಮನೆಗೆ ಕಡಿಯಾಳಿ ಆಸರೆ ಚಾರಿಟೇಬಲ್ ಟ್ರಸ್ಟ್ ಮೂಲಕ ಉಚಿತ ವಿದ್ಯುತ್ ಸಂಪರ್ಕ ಯೋಜನೆಯಡಿ ಬುಧವಾರ ಸ್ವಂತ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದರು. ಟ್ರಸ್ಟ್ ಮೂಲಕ ವಿದ್ಯುತ್ ಕಲ್ಪಿಸಲಾದ 74ನೇ ಮನೆ ಇದಾಗಿದೆ.

ಉಡುಪಿ ತಹಶೀಲ್ದಾರ್ ತಮ್ಮ ಪುತ್ರಿ ರಚನಾಳ 8ನೇ ಹುಟ್ಟುಹಬ್ಬ ಪ್ರಯುಕ್ತ ಈ ಮಾನವೀಯ ಕಾರ್ಯ ನಡೆಸಿದರು.

ಈ ಸಂದರ್ಭದದಲ್ಲಿ ವೀಣಾ ಪ್ರದೀಪ್, ಗೋಪಾಲಪುರ ವಾರ್ಡ್ ನಗರಸಭಾ ಸದಸ್ಯೆ ಮಂಜುಳಾ ನಾಯಕ್, ನಗರಸಭೆ ನಾಮನಿರ್ದೇಶಿತ ಸದಸ್ಯ ದಿನೇಶ್ ಪೈ, ಎಪಿಎಂಸಿ ನಾಮನಿರ್ದೇಶಿತ ಸದಸ್ಯ ಉಮೇಶ್ ಶೆಟ್ಟಿ ಹಾಗೂ ಆಸರೆ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಮತ್ತು ಕೆ. ಸತೀಶ್ ಕುಲಾಲ್, ನಿವೃತ್ತ ಶಿಕ್ಷಕ ರಾಜು ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!