ಉಡುಪಿ, ಜು. 11 (ಸುದ್ದಿಕಿರಣ ವರದಿ): ಕಾರ್ಪೊರೇಶನ್ ಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಶ್ರೀಕೃಷ್ಣ ಬಾಲನಿಕೇತನಕ್ಕೆ ತರಕಾರಿ ಇಡುವ ಕಪಾಟು, ಬಡಿಸುವ ಬಂಡಿ ನೀಡಲಾಗಿದ್ದು, ಈಚೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಸಮುಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.
ಯೂನಿಯನ್ ನ ಸಮಾಜಮುಖಿ ಕಾರ್ಯಕ್ಕೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾರ್ಪೊರೇಶನ್ ಬ್ಯಾಂಕ್ ಯೂನಿಯನ್ ಉಪಾಧ್ಯಕ್ಷ ರಘುರಾಮ ಕೃಷ್ಣ ಬಲ್ಲಾಳ, ಸಹಕಾರ್ಯದರ್ಶಿ ಹೆರಾಲ್ಡ್ ಡಿ’ಸೋಜ, ಉಡುಪಿ ವಲಯ ಕಾರ್ಯದರ್ಶಿ ನಾಗೇಶ್ ನಾಯಕ್, ಏರಿಯಾ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಮತ್ತು ರಮೇಶ್ ಇದ್ದರು.
ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಬಾಲನಿಕೇತನ ಉಪಾಧ್ಯಕ್ಷ ಪ್ರೊ. ಕಮಲಾಕ್ಷ, ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ರಘುರಾಮ ಆಚಾರ್ಯ, ರಾಮಚಂದ್ರ ಸನಿಲ್, ರಾಘವೇಂದ್ರ ರಾವ್, ಎಸ್. ವಿ. ಭಟ್, ಗುರುರಾಜ ಭಟ್, ಸುಹಾನಿ ಕಾಮತ್, ಉಡುಪಿ ರೋಟರಿ ಅಧ್ಯಕ್ಷ ಹೇಮಂತ ಕಾಂತ್, ಕಾರ್ಯದರ್ಶಿ ಜೆ. ಜಿ. ಪ್ರಭು, ಬಿ. ವಿ. ಲಕ್ಷ್ಮೀನಾರಾಯಣ, ರಾಧಿಕಾ ಲಕ್ಷ್ಮೀನಾರಾಯಣ, ದಿನೇಶ್ ಭಂಡಾರಿ, ವನಿತಾ ಉಪಾಧ್ಯಾಯ ಮೊದಲಾದವರಿದ್ದರು.