ಉಡುಪಿ: ಇಲ್ಲಿನ ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಆಶ್ರಯದಲ್ಲಿ ಬುಧವಾರ ನಡೆದ ಸಾಧಕರೊಂದಿಗೆ ನಾವು ಕಾರ್ಯಕ್ರಮದಲ್ಲಿ ಹಿರಿಯ ಸಂಗೀತ ಗುರು, ಪ್ರಾಧ್ಯಾಪಕ, ಪತ್ರಕರ್ತ, ನಿರ್ದೇಶಕ , ಉಡುಪಿ ನಾದ ವೈಭವಂ ಸಂಸ್ಥಾಪಕ ಉಡುಪಿ ವಾಸುದೇವ ಭಟ್ ಅವರನ್ನು ಇಂದ್ರಾಳಿಯಲ್ಲಿರುವ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
10 ಸಾವಿರ ರೂ. ಗೌರವಧನ ಸಹಿತ ಸ್ಮರಣಿಕೆ ನೀಡಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಗೌರವಿಸಿದರು.
ಪೂರ್ಣಿಮ ಜನಾರ್ದನ್ ಸ್ವಾಗತಿಸಿ, ಪರಿಚಯಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷೆ ಸಂಧ್ಯಾ ಶೆಣೈ ಮತ್ತು ಪತ್ರಕರ್ತ ಶೇಖರ ಅಜೆಕಾರು ಅಭಿನಂದನ ಮಾತುಗಳನ್ನಾಡಿದರು.
ವಾಸುದೇವ ಭಟ್ ಅವರ ಪತ್ನಿ ಸುನಂದಾ, ಮಗಳು ಶುಭಾ ಬಾಸ್ರಿ, ಸುದರ್ಶನ್ ದೇವಾಡಿಗ, ಪ್ರಶಾಂತ್ ಕಾಮತ್, ಸಾಹಿತ್ಯ ಪ್ರೇಮಿ ನರಸಿಂಹಮೂರ್ತಿ, ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಮೊದಲಾದವರಿದ್ದರು