ಉಡುಪಿ: ಇಲ್ಲಿನ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಆಶ್ರಯದಲ್ಲಿ ಬೆಂಗಳೂರಿನ ಪ್ರವರ ಹಾಗೂ ಅಶ್ವಘೋಷ ಥಿಯೇಟರ್ ಸಹಭಾಗಿತ್ವದಲ್ಲಿ ಜಿಲ್ಲೆಯ 16 ಮಂದಿ ನಾಟಕ ಕಲಾವಿದರಿಗೆ ತಲಾ 1,200 ರೂ. ಮೊತ್ತದ ಆಹಾರದ ಕಿಟ್ ವಿತರಿಸಲಾಯಿತು.
ಉಡುಪಿಯ ಬೇರೆ ಬೇರೆ ನಾಟಕ ತಂಡದ ಕಲಾವಿದರಿಗೆ ರೋಟರಿ ಮಣಿಪಾಲ್ ಅಧ್ಯಕ್ಷ ಮಾನಸ ರೋಗ ತಜ್ಞ ಡಾ| ವಿರೂಪಾಕ್ಷ ದೇವರಮನೆ ಕಿಟ್ ವಿತರಿಸಿ, ಸಂಸ್ಥೆಯ ಸೇವಾ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ| ಶಂಕರ್, ಪ್ರಧಾನ ಕಾರ್ಯದರ್ಶಿ ಗಿರೀಶ್ ತಂತ್ರಿ, ಖಜಾಂಚಿ ರಾಜೇಶ್ ಭಟ್ ಪಣಿಯಾಡಿ, ಸಮಿತ್ರ ಕೆರೆಮಠ, ರೂಪಶ್ರೀ ರಾಜೇಶ್, ಸಂಚಾಲಕ ರವಿರಾಜ್ ಎಚ್. ಪಿ. ಮೊದಲಾದವರಿದ್ದರು