Monday, July 4, 2022
Home ಸಮಾಚಾರ ಸಂಘಸಂಗತಿ ಕಲ್ಮಾಡಿ ಬಾಬಣ್ಣನ ಮನೆಗೆ ಬೆಳಕಾದ ಮೂಡುಬೆಳ್ಳೆ ಯುವಕ

ಕಲ್ಮಾಡಿ ಬಾಬಣ್ಣನ ಮನೆಗೆ ಬೆಳಕಾದ ಮೂಡುಬೆಳ್ಳೆ ಯುವಕ

ಉಡುಪಿ: ಕಳೆದ 80 ವರ್ಷದಿಂದ ತರ್ಪಲ್, ಕಲ್ಲು ಕಂಬ, ತೆಂಗಿನ ತರಗೆಲೆಗಳು ಹಾಕಿ ಜೀವನ ನಡೆಸುತ್ತಿದ್ದ ದಲಿತ ಸಮುದಾಯದ ಕಲ್ಮಾಡಿ ಬಾಬು ಕೆ. ಅವರಿಗೆ ಸ್ಥಳೀಯ ದಾನಿಗಳ ಸಹಕಾರದಿಂದ ರಚಿಸಿದ್ದ ನೂತನ ಮನೆ ಅಯೋಧ್ಯೆಗೆ ಕಡಿಯಾಳಿಯ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ವಿದ್ಯುತ್ ಸಂಪರ್ಕ ನೀಡಲಾಯಿತು. ಅದರ ಸಂಪೂರ್ಣ ವೆಚ್ಚವನ್ನು ಮೂಡುಬೆಳ್ಳೆ ಶಾಂತೇರಿ ಕಾಮಾಕ್ಷಿ ಜನರಲ್ ಸ್ಟೋರ್ಸ್ ನ ಅಶ್ವಿತ್ ನಾಯಕ್ ಮೂಡುಬೆಳ್ಳೆ ಭರಿಸುವ ಮೂಲಕ ತನ್ನ ಹುಟ್ಟುಹಬ್ಬ ಆಚರಿಸಿದರು.

ಆಸರೆ ಚಾರಿಟೇಬಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮತ್ತು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಪ್ರಧಾನಿ ನರೇಂದ್ರ ಮೋದಿ ಕನಸು ಘರ್ ಘರ್ ಬಿಜಲಿ (ಮನೆ ಮನೆಗೆ ವಿದ್ಯುತ್) ಉಡುಪಿಯಲ್ಲಿ ಸಹೃದಯೀ ದಾನಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ. 2021ರೊಳಗೆ ಉಡುಪಿ ನಗರದ ಶೇ. 100 ಮನೆಗಳಿಗೆ ವಿದ್ಯುತ್ ನೀಡಿ ದೇಶದ ಮೊತ್ತಮೊದಲ ಸಂಪೂರ್ಣ ವಿದ್ಯುತ್ ಹೊಂದಿದ ನಗರ ಮಾಡಲಾಗುವುದು ಎಂದರು.

ಕಲ್ಮಾಡಿ ವಾರ್ಡ್ ನಗರಸಭಾ ಸದಸ್ಯರಾದ ಸುಂದರ ಜೆ. ಕಲ್ಮಾಡಿ, ಆಸರೆ ಚಾರಿಟೇಬಲ್ ಟ್ರಸ್ಟಿನ ಕೋಶಾಧಿಕಾರಿ ಸತೀಶ್ ಕುಲಾಲ್, ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸದಸ್ಯರಾದ ರಾಕೇಶ್ ಜೋಗಿ, ರಂಜಿತ್ ಕಲ್ಮಾಡಿ ಮತ್ತು ಸ್ಥಳೀಯರು ಇದ್ದರು.

ಈ ಮನೆಯ ವಿದ್ಯುತ್ ಸಂಪರ್ಕ ವ್ಯವಸ್ಥೆ ನಿರ್ವಹಣೆಯನ್ನು ಕಡಿಯಾಳಿಯ ಮಹಿಷಮರ್ದಿನಿ ಎಲೆಕ್ಟ್ರಿಕಲ್ಸ್ ನ ಅಶ್ವತ್ಥ್ ದೇವಾಡಿಗ ನಿರ್ವಹಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!