Monday, July 4, 2022
Home ಸಮಾಚಾರ ಸಂಘಸಂಗತಿ ಗಾಲಿಕುರ್ಚಿ ಕೊಡುಗೆ

ಗಾಲಿಕುರ್ಚಿ ಕೊಡುಗೆ

ಕಾರ್ಕಳ: ಇಲ್ಲಿಗೆ ಸಮೀಪದ ಕೌಡೂರು ವಿನಯ ಕುಮಾರ್ ಮತ್ತು ಪ್ರಮೀಳ ದಂಪತಿಯ ಈರ್ವರು ಪುತ್ರರು ನಡೆಯಲು ಅಶಕ್ತರಾಗಿದ್ದು, ಇಡೀ ಕುಟುಂಬವೇ ಸಂಕಷ್ಟದಲ್ಲಿದ್ದು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಉಡುಪಿ ಜಿಲ್ಲಾ ಘಟಕ ಮತ್ತು ಅಧ್ಯಕ್ಷ ಹಾಗೂ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಮಾಜಿ ಜಿಲ್ಲಾ ಗವರ್ನರ್ ಡಾ| ತಲ್ಲೂರು ಶಿವರಾಮ ಶೆಟ್ಟಿ, ಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷರಾದ ಉದಯ ಕುಮಾರ್ ಹೆಗ್ಡೆ ಮತ್ತು ಸುನಿಲ್ ಕುಮಾರ್ ಶೆಟ್ಟಿ ಮುತುವರ್ಜಿಯಿಂದ ಕಣಂಜಾರು ಸೌಹಾರ್ದ ಸಭಾಭವನದಲ್ಲಿ ನಡೆದ ಲಯನ್ಸ್ ಪ್ರಾಂತೀಯ ಸಮ್ಮೇಳನದಲ್ಲಿ ಗಾಲಿಕುರ್ಚಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ, ದ್ವಿತೀಯ ಉಪ ಜಿಲ್ಲಾ ಗವರ್ನರ್ ಕೆ. ಸಿ. ವೀರಭದ್ರ, ಪ್ರಾಂತ್ಯ 1ರ ಪ್ರಥಮ ಮಹಿಳೆ ಸುಕನ್ಯಾ ಉದಯ ಕುಮಾರ್ ಹೆಗ್ಡೆ, ಮುಖ್ಯ ಅತಿಥಿ ಶಿಕ್ಷಣ ತಜ್ಞ ಮೇ| ರಾಧಾಕೃಷ್ಣ, ಜ್ಞಾನಸುಧಾ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ| ಸುಧಾಕರ ಶೆಟ್ಟಿ, ಸಮ್ಮೇಳನ ಸಮಿತಿ ಅಧ್ಯಕ್ಷ ಸುಜಯ ಜತ್ತನ್ನ, ಗುರುಪ್ರಸಾದ ಶೆಟ್ಟಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!