Monday, July 4, 2022
Home ಸಮಾಚಾರ ಸಂಘಸಂಗತಿ ಶ್ರೀಕೃಷ್ಣ ಬಾಲನಿಕೇತನಕ್ಕೆ ಜನರೇಟರ್ ಕೊಡುಗೆ

ಶ್ರೀಕೃಷ್ಣ ಬಾಲನಿಕೇತನಕ್ಕೆ ಜನರೇಟರ್ ಕೊಡುಗೆ

ಉಡುಪಿ, ಜು. 11 (ಸುದ್ದಿಕಿರಣ ವರದಿ): ಇಲ್ಲಿನ ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ರೋಟರಿ ಸದಸ್ಯರಾದ ಗುರುರಾಜ ಭಟ್ ಮತ್ತು ಶುಭಲಕ್ಷ್ಮಿ ದಂಪತಿ ಪುತ್ರ ಅಮೆರಿಕಾ ನಿವಾಸಿ ಆನಂದ ಮತ್ತು ಪಲ್ಲವಿ ಕೊಡುಗೆಯಾಗಿ ನೀಡಿದ ಜನರೇಟರ್ ಮತ್ತು ಇತರ ಉಪಕರಣಗಳನ್ನು ರೋಟರಿ ಉಡುಪಿ ಮೂಲಕ ಹಸ್ತಾಂತರಿಸಲಾಯಿತು.

ಬಾಲನಿಕೇತನ ಸಂಸ್ಥೆ ಅಧ್ಯಕ್ಷ, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆಯಿತು.
ಕೊಡುಗೆ ಸ್ವೀಕರಿಸಿದ ಶ್ರೀಪಾದರು ದಾನಿಗಳನ್ನು ಅಭಿನಂದಿಸಿ, ರೋಟರಿ ಸಂಸ್ಥೆಯ ಸಮುದಾಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂಥ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ವನಮಹೋತ್ಸವ
ಇದೇ ಸಂದರ್ಭದಲ್ಲಿ ಬಾಲನಿಕೇತನ ವಠಾರದಲ್ಲಿ ವನಮಹೋತ್ಸವ ಆಚರಿಸಲಾಗಿದ್ದು, ಗಿಡ ನೆಡುವ ಮೂಲಕ ಶ್ರೀಗಳು ಚಾಲನೆ ನೀಡಿದರು.

ರೋಟರಿ ಉಡುಪಿ ಅಧ್ಯಕ್ಷ ಹೇಮಂತ ಕಾಂತ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ವಂದಿಸಿದರು.

ಕಾರ್ಪೊರೇಶನ್ ಬ್ಯಾಂಕ್ ಯೂನಿಯನ್ ಉಪಾಧ್ಯಕ್ಷ ರಘುರಾಮ ಕೃಷ್ಣ ಬಲ್ಲಾಳ, ಸಹಕಾರ್ಯದರ್ಶಿ ಹೆರಾಲ್ಡ್ ಡಿ’ಸೋಜ, ಉಡುಪಿ ವಲಯ ಕಾರ್ಯದರ್ಶಿ ನಾಗೇಶ್ ನಾಯಕ್, ಏರಿಯಾ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಮತ್ತು ರಮೇಶ್ ಇದ್ದರು.

ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಬಾಲನಿಕೇತನ ಉಪಾಧ್ಯಕ್ಷ ಪ್ರೊ. ಕಮಲಾಕ್ಷ, ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ರಘುರಾಮ ಆಚಾರ್ಯ, ರಾಮಚಂದ್ರ ಸನಿಲ್, ರಾಘವೇಂದ್ರ ರಾವ್, ಎಸ್. ವಿ. ಭಟ್, ಗುರುರಾಜ ಭಟ್, ಸುಹಾನಿ ಕಾಮತ್, ರೋಟರಿ ಸದಸ್ಯರಾದ ಬಿ. ವಿ. ಲಕ್ಷ್ಮೀನಾರಾಯಣ, ರಾಧಿಕಾ ಲಕ್ಷ್ಮೀನಾರಾಯಣ, ದಿನೇಶ್ ಭಂಡಾರಿ, ವನಿತಾ ಉಪಾಧ್ಯಾಯ ಮೊದಲಾದವರಿದ್ದರು.

ಇದೇ ಸಂದರ್ಭದಲ್ಲಿ ರೋಟರಿ ಉಡುಪಿಯ ಈ ವರ್ಷದ ಸಮುದಾಯ ಸೇವೆ ಕಾರ್ಯಕ್ರಮಗಳನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!