Sunday, July 3, 2022
Home ಸಮಾಚಾರ ಸಂಘಸಂಗತಿ ಹಳೆವಿದ್ಯಾರ್ಥಿಗಳು ಸಂಸ್ಥೆಯ ಬೆನ್ನೆಲುಬು

ಹಳೆವಿದ್ಯಾರ್ಥಿಗಳು ಸಂಸ್ಥೆಯ ಬೆನ್ನೆಲುಬು

ಉಡುಪಿ: ಇಲ್ಲಿಗೆ ಸಮೀಪದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಈಚೆಗೆ ಸಂಘದ ಅಧ್ಯಕ್ಷ ಸಾಲ್ವದೋರ್ ನೊರೋನ್ಹಾ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾಲೇಜಿನ ಸಂಚಾಲಕ ಫಾ| ವೆಲೇರಿಯನ್ ಮೆಂಡೋನ್ಸಾ, ಹಳೆವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಬೆನ್ನೆಲುಬು. ಯಾವುದೇ ಶಿಕ್ಷಣ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿ ಅವರಿಂದ ಸಾಧ್ಯ ಎಂದರು.
ಈ ಸಂದರ್ಭದಲ್ಲಿ 2018- 19ನೇ ಸಾಲಿನ ಬಿ.ಕಾಂ. ವಿಭಾಗದಲ್ಲಿ ಮಂಗಳೂರು ವಿ.ವಿ. ಮಟ್ಟದಲ್ಲಿ ಚಿನ್ನದ ಪದಕ ಪಡೆದ ಧವನ್ ಅವರನ್ನು ಗೌರವಿಸಲಾಯಿತು.
2020-21ನೇ ಸಾಲಿನ ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಚುನಾವಣೆಯನ್ನು ಜಯರಾಮ ಶೆಟ್ಟಿಗಾರ್ ನಡೆಸಿಕೊಟ್ಟರು. ಅಧ್ಯಕ್ಷರಾಗಿ ಶೇಖರ್ ಗುಜ್ಜರಬೆಟ್ಟು, ಉಪಾಧ್ಯಕ್ಷರಾಗಿ ನವೀನ್ ಮತ್ತು ಲವಿನಾ ಡಿ’ಸೋಜ, ಕಾರ್ಯದರ್ಶಿ ಪ್ರೊ. ಸೋಫಿಯಾ ಡಯಾಸ್, ಜೊತೆ ಕಾರ್ಯದರ್ಶಿಗಳಾಗಿ ರೇಖಾ ಹಾಗೂ ಜೋಯ್ಸ್ ಲೂಯಿಸ್, ಕೋಶಾಧಿಕಾರಿ ಜೋಕಿಮ್ ಡಿ’ಸೋಜ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಜೊವಿಟಾ ಫೆರ್ನಾಂಡಿಸ್ ಮತ್ತು ಸತೀಶ್ ಆಯ್ಕೆಯಾದರು.
ಹಳೆವಿದ್ಯಾಥರ್ಿ ಸಂಘ ಕಾರ್ಯದರ್ಶಿ ಪ್ರೊ. ಸೋಫಿಯಾ ಡಯಾಸ್ ಗತ ವರ್ಷದ ವರದಿ ಮಂಡಿಸಿದರು. ಕಾಲೇಜು ಪ್ರಾಂಶುಪಾಲ ಡಾ| ವಿನ್ಸೆಂಟ್ ಆಳ್ವ ಇದ್ದರು.
ಈಚೆಗೆ ನಿಧನರಾದ ಕಾಲೇಜಿನ ಹಳೆವಿದ್ಯಾರ್ಥಿ ಹಾಗೂ ಸಂಘದ ಆಜೀವ ಸದಸ್ಯ ಬೆನ್ನೊ ರೋಡ್ರಿಗಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹಳೆವಿದ್ಯಾರ್ಥಿ ಸಂಘದ ನಿರ್ಗಮನ ಅಧ್ಯಕ್ಷ ಸಾಲ್ವದೋರ್ ನೊರೋನ್ಹಾ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರೇಖಾ ಯು. ವಂದಿಸಿದರು. ಕಾಲೇಜಿನ ಪಿ.ಆರ್.ಓ. ರವಿನಂದನ ಭಟ್ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!