Monday, July 4, 2022
Home ಸಮಾಚಾರ ಸಂಘಸಂಗತಿ ಹಸಿವು ನೀಗಿಸುವುದು ಉತ್ತಮ ಕಾರ್ಯ

ಹಸಿವು ನೀಗಿಸುವುದು ಉತ್ತಮ ಕಾರ್ಯ

ಮೂಲ್ಕಿ: ಮನುಷ್ಯನಿಗೆ ಯಾವುದೇ ವಸ್ತುಗಳನ್ನು ಎಷ್ಟು ನೀಡಿದರೂ ತೃಪ್ತನಾಗಲು ಸಾಧ್ಯವಿಲ್ಲ. ಆದರೆ, ಹೊಟ್ಟೆ ತುಂಬ ಊಟ ಮಾತ್ರ ತೃಪ್ತಿಯನ್ನು ನೀಡಬಲ್ಲುದು. ಈ ನಿಟ್ಟಿನಲ್ಲಿ ಹಸಿವು ನೀಗಿಸುವ ಕಾರ್ಯ ಅತ್ಯಂತ ಉತ್ತಮ ಕಾರ್ಯ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ಬ್ರಾಹ್ಮಣ ಸಮುದಾಯದ ಕುಟುಂಬಗಳಿಗೆ ಪುನರೂರು ವಿಪ್ರ ಸಂಪದ ನೇತೃತ್ವದಲ್ಲಿ ಆಹಾರಧಾನ್ಯ ಮತ್ತು ವೈದ್ಯಕೀಯ ಕಿಟ್ ವಿತರಣೆ ಕಾರ್ಯಕ್ಕೆ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಚಾಲನೆ ನೀಡಿ ಮಾತನಾಡಿದರು.

ಸಣ್ಣಪುಟ್ಟ ಕೆಲಸ ಮಾಡುತ್ತಾ ಬದುಕು ಕಟ್ಟಿಕೊಂಡಿರುವ ಕುಟುಂಬಗಳು ಅತೀವ ಸಂಕಷ್ಟಕ್ಕೊಳಗಾಗಿವೆ. ಅಂದು ದುಡಿದು ಅಂದೇ ಉಣ್ಣುವ ಅನಿವಾರ್ಯತೆಯಲ್ಲಿರುವ ಹಲವಾರು ಕುಟುಂಬಗಳಿಗೆ ಸ್ವಲ್ಪ ದಿನವಾದರೂ ಹಸಿವು ನೀಗಿಸಲು ಈ ಲಾಕ್ ಡೌನ್ ಸಂದರ್ಭದಲ್ಲಿ ವಿಪ್ರ ಸಂಪದ ಪುನರೂರು ಆಯೋಜಿಸಿರುವ ಈ ಕಾರ್ಯ ಶ್ಲಾಘನೀಯ ಎಂದರು.

ಸಂಸ್ಥೆ ವ್ಯಾಪ್ತಿಯ ಬರುವ 220 ಬ್ರಾಹ್ಮಣ ಕುಟುಂಬಗಳಿಗೆ 1.5 ಲಕ್ಷ ರೂ. ಮೌಲ್ಯದ ಆಹಾರ ಕಿಟ್ ಮತ್ತು ವೈದ್ಯಕೀಯ ಕಿಟ್ ನೀಡಲಾಯಿತು.

ಈ ಸಂದರ್ಭದಲ್ಲಿ ವಿಪ್ರ ಸಂಪದ ಅಧ್ಯಕ್ಷ ಜನಕರಾಜ್ ರಾವ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ರಾವ್, ಕೋಶಾಧಿಕಾರಿ ಅವಿನಾಶ್ ರಾವ್, ಪ್ರಮುಖರಾದ ಪಠೇಲ್ ವಾಸುದೇವ ರಾವ್, ಹರಿದಾಸ್ ಭಟ್ ತೋಕೂರು, ಸುರೇಶ ರಾವ್ ನೀರಳಿಕೆ, ಸುಧಾಕರ ರಾವ್, ಶಿವಪ್ರಸಾದ್ ಭಟ್, ಕಾಶೀ ವಿಶ್ವನಾಥ ರಾವ್, ರಾಘವೇಂದ್ರ ರಾವ್, ವಿಶ್ವನಾಥ ರಾವ್, ದೇವಪ್ರಸಾದ್ ಪುನರೂರು, ಗೋಪೀನಾಥ ರಾವ್, ಜಯಲಕ್ಷ್ಮಿ ರಾವ್, ಮುರಳೀಧರ, ಶಶಾಂಕ್ ಮುಚ್ಚಿಂತಾಯ, ಚೇತನ್, ಅರವಿಂದ, ಸೂರಜ್, ಶ್ರೀಶ, ಲಕ್ಷ್ಮೀಶ ಆಚಾರ್, ವೆಂಕಟೇಶ, ಶ್ರೀನಾಥ, ಅಭಿಷೇಕ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!