Monday, July 4, 2022
Home ಸಮಾಚಾರ ಸಂಘಸಂಗತಿ ಚಿನ್ನದ ಪದಕ ಪುರಸ್ಕೃತರಿಗೆ ಸನ್ಮಾನ

ಚಿನ್ನದ ಪದಕ ಪುರಸ್ಕೃತರಿಗೆ ಸನ್ಮಾನ

ಉಡುಪಿ: ಮುಖ್ಯಮಂತ್ರಿಯಿಂದ ಚಿನ್ನದ ಪದಕ ಸ್ವೀಕರಿಸಿದ ಅಗ್ನಿಶಾಮಕ ಹಾಗೂ ತುರ್ತು ಸೇವಾದಳದ ನಾಲ್ವರು ಸಿಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ಇಲ್ಲಿನ ಅಗ್ನಿಶಾಮಕ ದಳ ಹಾಗೂ ತುರ್ತು ಸೇವಾದಳ ಕಚೇರಿ ಯಲ್ಲಿ ನಡೆಯಿತು.

ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಚ್. ಎಂ. ವಸಂತ್ ಕುಮಾರ್, ಆಶ್ವಿನ್ ಸನಿಲ್, ಎಂ. ಕೇಶವ ಹಾಗೂ ನೂತನ್ ಕುಮಾರ್ ಅವರಿಗೆ ಇಲಾಖೆ ಸಿಬಂದಿಗಳು ಗೌರವಯುತವಾಗಿ ಮೈಸೂರು ಪೇಟ,ಶಾಲು ಹೊದಿಸಿ ಸನ್ಮಾನಿಸಿದರು.

ಅಗ್ನಿಶಾಮಕ ಹಾಗು ತುರ್ತು ಸೇವಾ ಇಲಾಖೆಯಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಚಿನ್ನದ ಪದಕಕ್ಕೆ ಪಾತ್ರರಾಗಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಠಾಣಾಧಿಕಾರಿ ಸತೀಶ್ ವಹಿಸಿದ್ದರು.

ಸಿಬಂದಿ ವಿನಾಯಕ್ ಸ್ವಾಗತಿಸಿ, ಅಲ್ವಿನ್ ಪ್ರಶಾಂತ್ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!