Monday, July 4, 2022
Home ಸಮಾಚಾರ ಸಂಘಸಂಗತಿ ಛಾಯಾಗ್ರಹಣದಲ್ಲಿ ಅಧ್ಯಯನ ದೃಷ್ಟಿ ಹೆಚ್ಚಿಸಿ

ಛಾಯಾಗ್ರಹಣದಲ್ಲಿ ಅಧ್ಯಯನ ದೃಷ್ಟಿ ಹೆಚ್ಚಿಸಿ

ಉಡುಪಿ: ಛಾಯಾಗ್ರಹಣದಲ್ಲಿ ನಮ್ಮ ಅಧ್ಯಯನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬೇಕು. ಜೊತೆಗೆ ಕಲಿಕೆಯ ಆಸಕ್ತಿಯೂ ನಮಗಿರಬೇಕು. ನಾವು ತೆಗೆದ ಛಾಯಾಚಿತ್ರಗಳನ್ನು ಪ್ರೀತಿಸಲು ಕಲಿಯಬೇಕು ಎಂದು ಖ್ಯಾತ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಹೇಳಿದರು.

ಇಲ್ಲಿನ ಮಿಷನ್ ಕಂಪೌಂಡ್ ಜಗನ್ನಾಥ ಸಭಾಭವನದಲ್ಲಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ಉಡುಪಿ ವಲಯ ಹಮ್ಮಿಕೊಂಡ ಸ್ಟ್ರೀಟ್ ಫೋಟೋಗ್ರಫಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಛಾಯಾಗ್ರಹಣ ಕ್ಷೇತ್ರವನ್ನು ಬಯಸಿ ಬಂದ ಮೇಲೆ ಬದುಕು ಕಟ್ಟಿಕೊಳ್ಳಲು ಅದನ್ನು ಉದ್ಯೋಗವಾಗಿಸಿಕೊಳ್ಳುವುದರ ಜೊತೆಗೆ ಹೆಸರನ್ನೂ ಸಂಪಾದಿಸಿಕೊಳ್ಳಬೇಕು ಎಂದರು.

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ಜಿಲ್ಲಾ ಮಾಧ್ಯಮ ಪ್ರತಿನಿಧಿ ಜನಾರ್ದನ ಕೊಡವೂರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಕೊಳಲಗಿರಿ, ವಲಯ ಕೋಶಾಧ್ಯಕ್ಷ ಪ್ರಸಾದ್ ಜತ್ತನ್ ಇದ್ದರು.

ಈ ಸಂದರ್ಭದಲ್ಲಿ ಈಚೆಗೆ ಅಗಲಿದ ಅಶೋಕ್ ಕುಮಾರ್ ಶೆಟ್ಟಿ ಹಾಗು ಸಬಾಸ್ಟಿನ್ ಅಂಚನ್ ಅವರಿಗೆ ನುಡಿ ನಮನ ಸಲ್ಲಿಸಿ, ಪುಷ್ಪಾರ್ಚನೆ ಸಲ್ಲಿಸಲಾಯಿತು.

ವಲಯಾಧ್ಯಕ್ಷ ಪ್ರಕಾಶ್ ಕೊಡಂಕೂರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುಕೇಶ್ ಕೆ. ಅಮೀನ್ ವಂದಿಸಿದರು. ರಾಘವೇಂದ್ರ ಸೇರಿಗಾರ್ ನಿರೂಪಿಸಿದರು.

ಬಳಿಕ ಆಸ್ಟ್ರೋ ಮೋಹನ್ ಅವರಿಂದ ಸ್ಟ್ರೀಟ್ ಫೋಟೋಗ್ರಫಿ ಬಗ್ಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಕಾರ್ಯಾಗಾರ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!