Thursday, July 7, 2022
Home ಸಮಾಚಾರ ಸಂಘಸಂಗತಿ ಮಹಿಳಾ ಸಬಲೀಕರಣದಲ್ಲಿ ಇನ್ನರ್ ವ್ಹೀಲ್ ಪಾತ್ರ ಗಮನಾರ್ಹ

ಮಹಿಳಾ ಸಬಲೀಕರಣದಲ್ಲಿ ಇನ್ನರ್ ವ್ಹೀಲ್ ಪಾತ್ರ ಗಮನಾರ್ಹ

ಉಡುಪಿ: ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಶೋಷಣೆ ತಡೆಗಟ್ಟಿ ಅವರನ್ನು ಸ್ವಾಭಿಮಾನದಿಂದ ಬದುಕುವಂತೆ ಮಾಡುವಲ್ಲಿ ಅಂತಾರಾಷ್ಟ್ರೀಯ ಇನ್ನರ್ ವ್ಹೀಲ್ ಕರೆ ಸಮಯೋಚಿತವಾಗಿದೆ. ಲಿಂಗ ಸಮಾನತೆಗಾಗಿ ಶ್ರಮಿಸುವ ಜೊತೆಗೆ ಕೆಳಸ್ತರದ ಸಮಾಜದಲ್ಲಿ ಇನ್ನೂ ಶೋಷಣೆಗೊಳಗಾಗುತ್ತಿರುವ ಮಹಿಳೆಯರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಇನ್ನರ್ ವ್ಹೀಲ್ ಮಹಿಳಾ ಸಂಘಟನೆಗಳು ಹಮ್ಮಿಕೊಂಡಿರುವ ಯೋಜನೆಗಳು ಶ್ಲಾಘನೀಯ ಎಂದು ರೋಟರಿ ಜಿಲ್ಲಾ 3182ರ ನಿಯೋಜಿತ ಗವರ್ನರ್ ಡಾ. ಗೌರಿ ಹೇಳಿದರು.

ಇನ್ನರ್ ವ್ಹೀಲ್ ಉಡುಪಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವಿಚಾರದಲ್ಲಿ ಸ್ಪಷ್ಟತೆ, ನಿರ್ಧಾರ ತೆಗೆದುಕೊಳ್ಳುವಲ್ಲಿ ದೃಢತೆ, ಕಾರ್ಯನಿರ್ವಹಣೆಯಲ್ಲಿ ಶ್ರದ್ಧೆ ಮತ್ತು ಬದ್ಧತೆ, ನಡೆ- ನುಡಿಯಲ್ಲಿ ನಮ್ರತೆ ಮೈಗೂಡಿಸಿಕೊಂಡಲ್ಲಿ ನಾಯಕತ್ವದಲ್ಲಿ ಯಶಸ್ಸು ಪಡೆಯಬಹುದು. ಈ ಎಲ್ಲಾ ಗುಣ ಲಕ್ಷಣ ಹೊಂದಿರುವ ಶುಭಾ ಬಾಸ್ರಿ ಮತ್ತವರ ನೂತನ ತಂಡಉಡುಪಿ ಇನ್ನರ್ ವ್ಹೀಲ್ ಕ್ಲಬ್ ಗೆ ಸಮರ್ಥ ನಾಯಕತ್ವ ನೀಡುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದರು.

ಕ್ಲಬ್ ಪೂರ್ವಾಧ್ಯಕ್ಷೆ ನಿರ್ಮಲಾ ಪ್ರಭಾಕರ್ ನೂತನ ಅಧ್ಯಕ್ಷೆ ಶುಭಾ ಎಸ್. ಬಾಸ್ರಿ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ, ಇನ್ನರ್ ವ್ಹೀಲ್ ಸಂಘಟನೆಯ ಧ್ಯೇಯ, ಧೋರಣೆ ಮತ್ತು ಶಿಷ್ಟಾಚಾರ ಕುರಿತು ಮಾತನಾಡಿದರು.

ಸುರೇಖ ಕಲ್ಕೂರ (ಉಪಾಧ್ಯಕ್ಷೆ), ಶಾಲಿನಿ ರಾಘವೇಂದ್ರ (ಕಾರ್ಯದರ್ಶಿ), ವೈಷ್ಣವಿ ಆಚಾರ್ಯ (ಖಚಾಂಚಿ) ಪದ್ಮಿನಿ ಜನಾರ್ದನ್ (ಐಎಸ್.ಒ), ಡಾ. ವೀಣಾ ಸುದರ್ಶನ್ ಭಟ್ (ಕಸ್ತೂರಿ ಸಂಪಾದಕಿ) ಮತ್ತು ಸರಿತಾ (ಜೊತೆ ಕಾರ್ಯದರ್ಶಿ) ಅವರಿಗೆ ಜವಾಬ್ದಾರಿ ಹಸ್ತಾಂತರಿಸಲಾಯಿತು.

ನಿರ್ಗಮನ ಅಧ್ಯಕ್ಷೆ ಮಾಲತಿ ತಂತ್ರಿ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಸತ್ಯವತಿ ಹೆಬ್ಬಾರ್ ಗತವರ್ಷದ ವರದಿ ವಾಚಿಸಿದರು.

ನೂತನ ಅಧ್ಯಕ್ಷೆ ಶುಭಾ ಬಾಸ್ರಿ ತನ್ನ ಪದಸ್ವೀಕಾರ ಭಾಷಣದಲ್ಲಿ ಅಂತಾರಾಷ್ಟ್ರೀಯ ಇನ್ನರ್ ವ್ಹೀಲ್ ಅಧ್ಯಕ್ಷೆಯ ಈ ವರ್ಷದ ಕರೆ ಪಿಂಕ್ ಫಸ್ಟ್ ಕುರಿತು ಮಾತನಾಡಿ, ಸಮುದಾಯದಲ್ಲಿ ಸ್ತ್ರೀ ಸಬಲೀಕರಣ, ಶೋಷಿತೆಯರಿಗೆ ಧೈರ್ಯ ತುಂಬಿ ಬೆಂಬಲ, ಹೆಣ್ಣುಮಕ್ಕಳ ಸರ್ವಾಂಗೀಣ ಬೆಳವಣಿಗೆ, ಶಿಕ್ಷಣ ಮತ್ತು ಆರೋಗ್ಯ, ಸದಸ್ಯೆಯರ ವ್ಯಕ್ತಿಗತ ಬೆಳವಣಿಗೆ ಹಾಗೂ ಅಂತಾರಾಷ್ಟ್ರೀಯ ತಿಳಿವಳಿಕೆ ಉತ್ತೇಜಿಸುವಲ್ಲಿ ಆದ್ಯತೆಯ ಮೇರೆಗೆ ಈ ವರ್ಷ ಕಾರ್ಯಯೋಜನೆ ಅನುಷ್ಠಾನಗೊಳಿಸುವ ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಒಳರೋಗಿಗಳಿಗೆ ಮಾಸ್ಕ್ ವಿತರಣೆ ಮತ್ತು ರೋಟರಿ ಜಿಲ್ಲೆಯ ವಿದ್ಯಾಸೇತು ಯೋಜನೆಗೆ ಇನ್ನರ್ ವ್ಹೀಲ್ ಕೊಡುಗೆ ನೀಡಲಾಯಿತು.

ಕ್ಲಬ್ ಗೆ ಸುಮನ ಆಚಾರ್ಯ, ಡಾ. ವಿದ್ಯಾ ವ್ಯಾಸರಾಜ ತಂತ್ರಿ, ಪ್ರೇಮಾ ಜಗದೀಶ್ ಮತ್ತು ಅಮಲಾ ನೂತನ ಸದಸ್ಯೆಯರಾಗಿ ಸೇರ್ಪಡೆಗೊಂಡರು.

ಉಡುಪಿ ರೋಟರಿ ಮಾಜಿ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ ಕ್ಲಬ್ ಗೃಹಪತ್ರಿಕೆ ಕಸ್ತೂರಿ ಅನಾವರಣಗೊಳಿಸಿದರು. ಸಂಪಾದಕಿ ವನಿತಾ ಉಪಾಧ್ಯಾಯ ಇದ್ದರು.

ನೂತನ ಕಾರ್ಯದರ್ಶಿ ಶಾಲಿನಿ ರಾಘವೇಂದ್ರ ಪ್ರಕಟಣೆ ಮತ್ತು ಸಂದೇಶಗಳನ್ನು ವಾಚಿಸಿದರು. ಉಪಾಧ್ಯಕ್ಷೆ ಸುರೇಖಾ ವಂದಿಸಿದರು. ರಶ್ಮಿ ಹೊಳ್ಳ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!