Saturday, July 2, 2022
Home ಸಮಾಚಾರ ಸಂಘಸಂಗತಿ ರಾಜ್ಯ ಬಸ್ ಮಾಲಕರ ಸಂಘದ ಒಕ್ಕೂಟ ಅಧ್ಯಕ್ಷರಾಗಿ ಕುಯಿಲಾಡಿ ಆಯ್ಕೆ

ರಾಜ್ಯ ಬಸ್ ಮಾಲಕರ ಸಂಘದ ಒಕ್ಕೂಟ ಅಧ್ಯಕ್ಷರಾಗಿ ಕುಯಿಲಾಡಿ ಆಯ್ಕೆ

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
*****************************

(ಸುದ್ದಿಕಿರಣ ವರದಿ)

ಉಡುಪಿ, ಜು. 10: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ರಾಜ್ಯ ಬಸ್ ಮಾಲಕರ ಸಂಘದ ಒಕ್ಕೂಟ (ಎಫ್.ಓ.ಬಿ.ಎ.ಕೆ.ಎಸ್.) ಅಧ್ಯಕ್ಷರಾಗಿ ಕುಯಿಲಾಡಿ ಸುರೇಶ ನಾಯಕ್ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ ಕಾರ್ಯಾಧ್ಯಕ್ಷ- ಲಿಂಗಾರೆಡ್ಡಿ ಚಿತ್ರದುರ್ಗ, ಉಪಾಧ್ಯಕ್ಷರು- ಸದಾನಂದ ಛಾತ್ರ ಉಡುಪಿ, ಮಂಜುನಾಥ ತುಮಕೂರು, ಅನ್ವರ್ ಪಾಶಾ ಚಾಮರಾಜನಗರ, ರಂಗಪ್ಪ ಶಿವಮೊಗ್ಗ, ಮಲ್ಲೇಶಪ್ಪ ದಾವಣಗೆರೆ, ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಮತ್ತು ವಜ್ರಗೌಡ ಮೈಸೂರು, ಪ್ರಧಾನ ಕಾರ್ಯದರ್ಶಿ- ಕೆ. ಕೆ. ಬಾಲಕೃಷ್ಣ ಚಿಕ್ಕಮಗಳೂರು, ಕಾರ್ಯದರ್ಶಿ- ವಿಕ್ರಮ್ ಬೆಂಗಳೂರು, ಜೊತೆ ಕಾರ್ಯದರ್ಶಿಗಳು- ಜೀವಂಧರ ಅಧಿಕಾರಿ ಮಂಗಳೂರು, ಮಂಜೇಗೌಡ ಮಂಡ್ಯ, ಶಿವಗಣೇಶ್ ಬೆಂಗಳೂರು ಗ್ರಾಮಾಂತರ, ಮಾಧವ ನಾಯ್ಕ ಧಾರವಾಡ, ಆರ್. ಪಾರಿ ಮೈಸೂರು ಮತ್ತು ಶಿವಕುಮಾರ್ ಬೆಂಗಳೂರು, ಸಂಘಟನಾ ಕಾರ್ಯದರ್ಶಿಗಳು- ಜ್ಯೋತಿಪ್ರಸಾದ್ ಹೆಗ್ಡೆ ಮಂಗಳೂರು, ಅಜ್ಜಪ್ಪ ಚಿತ್ರದುರ್ಗ ಮತ್ತು ಶಂಕರನಾರಾಯಣ ತುಮಕೂರು, ಕೋಶಾಧಿಕಾರಿ- ದಿಲ್ ರಾಜ್ ಆಳ್ವ ಮಂಗಳೂರು ಹಾಗೂ ಗೌರವ ಸಲಹೆಗಾರರು- ಜಯಪ್ರಕಾಶ ಶೆಣೈ ಮಂಗಳೂರು, ರತ್ನಾಕರ ಅಧಿಕಾರಿ ಧಾರವಾಡ ಮತ್ತು ಸುಭಾಷ್ ರೆಡ್ಡಿ ಚಿಕ್ಕಬಳ್ಳಾಪುರ ಆಯ್ಕೆಯಾಗಿದ್ದಾರೆ.

ರಾಜ್ಯದ 20 ಜಿಲ್ಲೆಗಳ ಬಸ್ ಮಾಲಕರ ಸಂಘದ ತಲಾ 5 ಮಂದಿ ಪ್ರತಿನಿಧಿಗಳು ಒಕ್ಕೂಟದಲ್ಲಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!