Thursday, July 7, 2022
Home ಸಮಾಚಾರ ಸಂಘಸಂಗತಿ ಲಯನ್ಸ್ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಲಯನ್ಸ್ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಉಡುಪಿ: ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ನೀಡುವ ಲಯನ್ಸ್ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಮಣಿಪಾಲ ಕೆಎಂಸಿ ಆಸ್ಪತ್ರೆ ನೇತ್ರತಜ್ಞೆ ಡಾ. ಸುಲತಾ ವಿ. ಭಂಡಾರಿ ಅವರಿಗೆ ಈಚೆಗೆ ಪ್ರದಾನ ಮಾಡಲಾಯಿತು.
ಇಲ್ಲಿನ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಲಯನ್ಸ್ ಕ್ಲಬ್ ಉಡುಪಿ ಅಧ್ಯಕ್ಷ ಪ್ರಸಾದ್ ಶೆಟ್ಟಿ ವರ್ವಾಡಿ ಪ್ರಶಸ್ತಿ ಪ್ರದಾನ ಮಾಡಿದರು.
ಖ್ಯಾತ ಮನೋಚಿಕಿತ್ಸಕ ಡಾ. ಪಿ. ವಿ. ಭಂಡಾರಿ, ಕನ್ನಡ ಮಾತನಾಡುವವರು ಹೆಮ್ಮೆಪಡಬೇಕಾದ ಅಗತ್ಯತೆ ಬಗ್ಗೆ ವಿವರಿಸಿದರು.
ಹಿರಿಯ ವೈದ್ಯ ಹಾಗೂ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಡಾ. ಎ. ರವೀಂದ್ರನಾಥ ಶೆಟ್ಟಿ, ಲಯನ್ಸ್ ಕಾರ್ಯದರ್ಶಿ ಅಲೆವೂರು ದಿನೇಶ್ ಕಿಣಿ, ಕೋಶಾಧಿಕಾರಿ ಲೂಯಿಸ್ ಲೋಬೊ, ಲಯನ್ ಲೇಡಿ ಕೌನ್ಸಿಲ್ ಅಧ್ಯಕ್ಷೆ ರೂಪಾ ಡಿ. ಕಿಣಿ, ಕಾರ್ಯದರ್ಶಿ ಚಂದ್ರಿಕಾ ರವೀಶ್, ಕೋಶಾಧಿಕಾರಿ ಮಮತಾ ಶೆಟ್ಟಿ, ಲಿಯೊ ಕ್ಲಬ್ ಕೋಶಾಧಿಕಾರಿ ಅಭಿನವ್ ಕಿಣಿ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!