Thursday, July 7, 2022
Home ಸಮಾಚಾರ ಸಂಘಸಂಗತಿ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರ ಆಯ್ಕೆ

ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರ ಆಯ್ಕೆ

ಉಡುಪಿ: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಜೇಸಿಐ ಶೇಖರ ಗುಜ್ಜರಬೆಟ್ಟು ಆಯ್ಕೆಯಾಗಿದ್ದಾರೆ.
ಶನಿವಾರ ಕಾಲೇಜಿನಲ್ಲಿ ಸಂಘದ ಅಧ್ಯಕ್ಷ ಸಾಲ್ವಡೋರ್ ನೊರೊನ್ಹಾ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ಅವಿರೋಧವಾಗಿ ನಡೆಯಿತು.
ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಫಾ| ವಲೇರಿಯನ್ ಮೆಂಡೊನ್ಸಾ, ಪ್ರಾಂಶುಪಾಲ ಡಾ| ವಿನ್ಸೆಂಟ್ ಆಳ್ವ ಮತ್ತು ಚುನಾವಣಾಧಿಕಾರಿ ಡಾ| ಜಯರಾಮ ಶೆಟ್ಟಿಗಾರ್ ಇದ್ದರು.
ಇತರ ಪದಾಧಿಕಾರಿಗಳಾದಿ ನವೀನ ಕೋಟ್ಯಾನ್ ಮತ್ತು ಲವಿನಾ ಡಿ’ಸೋಜಾ (ಉಪಾಧ್ಯಕ್ಷರು), ಪ್ರೊ. ಸೋಫಿಯಾ ಡಯಾಸ್ (ಗೌರವ ಕಾರ್ಯದರ್ಶಿ), ಜೋಕ್ವಿಮ್ ಡಿ’ಸೋಜ (ಖಜಾಂಚಿ), ಜೊಯ್ಸ್ ಲೂಯಿಸ್ ಮತ್ತು ರೇಖಾ ಯು. (ಜೊತೆ ಕಾರ್ಯದರ್ಶಿಗಳು), ಜೊವಿಟಾ ಫೆನರ್ಾಂಡಿಸ್ ಮತ್ತು ಸತೀಶ್ ನಾಕ್ (ಸಾಂಸ್ಕೃತಿಕ ಕಾರ್ಯದರ್ಶಿಗಳು) ಮತ್ತು 16 ಮಂದಿ ಕಾರ್ಯನಿರ್ವಾಹಕ ಸದಸ್ಯರ ಆಯ್ಕೆ ನಡೆಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!