Monday, July 4, 2022
Home ಸಮಾಚಾರ ಸಂಘಸಂಗತಿ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಗೆ ಆಯ್ಕೆ

ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಗೆ ಆಯ್ಕೆ

ಉಡುಪಿ: ಇಲ್ಲಿನ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಕಲ್ಯಾಣಪುರ ಅಬ್ದುಲ್ ಗಫೂರ್ ಆಯ್ಕೆಯಾಗಿದ್ದಾರೆ.

ಈಚೆಗೆ ಸಂಸ್ಥೆ ಅಧ್ಯಕ್ಷ ವಿ. ಎಸ್. ಉಮರ್ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ನಿಕಟಪೂರ್ವ ಕಾರ್ಯದರ್ಶಿ ಖಲೀಲ್ ಅಹಮದ್ ವಾರ್ಷಿಕ ವರದಿ, ಖಜಾಂಚಿ ಮುನೀರ್ ಲೆಕ್ಕಪತ್ರ ಮಂಡಿಸಿದರು.

ಈ ಸಂದರ್ಭದಲ್ಲಿ ಮುಂದಿನ ಒಂದು ವರ್ಷ ಅವಧಿಗೆ ನೂನತ ಸಮಿತಿ ರಚಿಸಲಾಯಿತು. ಉಪಾಧ್ಯಕ್ಷರಾಗಿ ಕೆ. ಅಬ್ದುಲ್ ಗಫೂರ್ ಆದಿವುಡುಪಿ, ಕಾರ್ಯದರ್ಶಿಯಾಗಿ ಯು. ಇಬ್ರಾಹಿಮ್, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಫಯಾಜ್ ಹಾಗು ಖಜಾಂಚಿಯಾಗಿ ಝಾಕಿರ್ ಹುಸೇನ್, ಸದಸ್ಯರಾಗಿ ವಿ. ಎಸ್. ಉಮರ್, ಮುನೀರ್ ಮಹಮೂದ್, ಖಾಲಿದ್ ಅಬ್ದುಲ್ ಅಝೀಜ್, ಎಸ್. ಎ. ಶಮೀಮ್, ರಿಯಾಜ್ ಅಹ್ಮದ್, ಇಕ್ವಾನ್ ಜಿ. ರವೂಫ್ ಆಯ್ಕೆಯಾದರು.

ಇಕ್ಬಾಲ್ ಮನ್ನಾ ಮತ್ತು ಪರ್ವೇಜ್ ಯಾಕೂಬ್ ಅವರನ್ನು ಹೆಚ್ಚುವರಿ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!