Sunday, July 3, 2022
Home ಸಮಾಚಾರ ಸಂಘಸಂಗತಿ ರೋಟರಿ ಜಿಲ್ಲೆ 3182 ಯೋಜನೆ: ಪ್ಲಾಸ್ಟಿಕ್, ಇ-ತ್ಯಾಜ್ಯ ನಿರ್ವಹಣೆ

ರೋಟರಿ ಜಿಲ್ಲೆ 3182 ಯೋಜನೆ: ಪ್ಲಾಸ್ಟಿಕ್, ಇ-ತ್ಯಾಜ್ಯ ನಿರ್ವಹಣೆ

ಉಡುಪಿ: ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3182 ಪರಿಸರ ಪೂರಕ ಯೋಜನೆಗಳನ್ನು ಕೈಗೆತ್ತಿಕೊಂಡಿದೆ ಎಂದು ರೋಟರಿ ಗವರ್ನರ್ ಎಂ.ಜಿ. ರಾಮಚಂದ್ರಮೂರ್ತಿ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಸರ ರಕ್ಷಣೆ ಯೋಜನೆಯಡಿ 1 ಲಕ್ಷ ಸಸಿ ನೆಡುವ ಗುರಿ ಇರಿಸಿಕೊಳ್ಳಲಾಗಿದೆ.

ಪ್ರಸ್ತುತ ಪ್ಲಾಸ್ಟಿಕ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಇ-ತ್ಯಾಜ್ಯ ನಿರ್ವಹಣೆ ಕಷ್ಟಕರವಾಗಿ ಪರಿಣಿಮಿಸಿದ್ದು, ಮುಂದಿನ ದಿನಗಳಲ್ಲಿ ಭಾರೀ ಸಮಸ್ಯೆಯಾಗಿ ಕಾಡಲಿದೆ. ಈ ನಿಟ್ಟಿನಲ್ಲಿ ಇ- ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಅದಕ್ಕಾಗಿ ಬೆಂಗಳೂರಿನ ಝೀರೋ ವೇಸ್ಟ್ ಕಂಪೆನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಉಡುಪಿ ಸೇರಿದಂತೆ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನಗಳಲ್ಲಿ ಪ್ಲಾಸ್ಟಿಕ್ ಮತ್ತು ಇ- ತ್ಯಾಜ್ಯ ಸಂಗ್ರಹ ಕೇಂದ್ರ ಸ್ಥಾಪಿಸಲಾಗುವುದು. ಇದು 3 ವರ್ಷದ ಯೋಜನೆಯಾಗಿದೆ ಎಂದರು.

ಮನೆ ಮನೆಗಳ ಕಸ, ತ್ಯಾಜ್ಯ ಇತ್ಯಾದಿಗಳನ್ನು ನಿರ್ವಹಿಸಿ, ಕಸದಿಂದ ರಸ ತೆಗೆಯುವ ಯೋಜನೆ ಕಂಪೋಸ್ಟಿಂಗ್ ನ್ನು ಜಾರಿಗೊಳಿಸಲಾಗಿದ್ದು, ಮನೆ ತ್ಯಾಜ್ಯದಿಂದ ಗೊಬ್ಬರ ಉತ್ಪಾದಿಸುವ ಯೋಜನೆ ಇದಾಗಿದೆ ಎಂದರು.

ರೋಟರಿ ಪದಾಧಿಕಾರಿಗಳಾದ ಎಸ್. ಸುಬ್ರಹ್ಮಣ್ಯ ಬಾಸ್ರಿ, ವಲಯ 4ರ ಸಹಾಯಕ ಗವರ್ನರ್ ಡಾ. ಸುರೇಶ ಶೆಣೈ, ರೋಟರಿ ಜಿಲ್ಲೆ 3182ರ ಜೊತೆ ಕಾರ್ಯದರ್ಶಿ ಮುರಳಿ, ಕೋ- ಆರ್ಡಿನೇಟರ್ ರವೀಂದ್ರ ಐತಾಳ, ಉಡುಪಿ ರೋಟರಿ ಅಧ್ಯಕ್ಷ ಹೇಮಂತ ಕಾಂತ್, ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು, ಕೋಶಾಧಿಕಾರಿ ಗುರುರಾಜ ಭಟ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!