ಉಡುಪಿ: ದೇಶದ ಪ್ರಜಾಪ್ರಭುತ್ವದ ಜೀವನಾಡಿ, ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭ ಎಂದೇ ಪರಿಗಣಿತವಾದ ಪತ್ರಿಕಾ ದಿನಾಚರಣೆಯನ್ನು ಉಡುಪಿ ಇನ್ನರ್ ವ್ಹೀಲ್ ಆಶ್ರಯದಲ್ಲಿ ಗುರುವಾರ ಆಚರಿಸಲಾಯಿತು.
ಪತ್ರಕರ್ತನಾಗಿ ಸುಮಾರು 25 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಸಮಾಜಮುಖಿ ಪ್ರಜ್ಞೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತ, ಸುಬ್ರಹ್ಮಣ್ಯ ಜಿ. ಕುರ್ಯ ಅವರನ್ನು ಅವರ ಸ್ವಗೃಹದಲ್ಲಿ ಸಂಮಾನಪತ್ರದೊಮದಿಗೆ ಗೌರವಿಸಲಾಯಿತು.
ಇನ್ನರ್ ವ್ಹೀಲ್ ಅಧ್ಯಕ್ಷೆ ಶುಭಾ ಎಸ್. ಬಾಸ್ರಿ ಸನ್ಮಾನಿಸಿದರು. ಕಾರ್ಯದರ್ಶಿ ಶಾಲಿನಿ ರಾಘವೇಂದ್ರ ವಂದಿಸಿದರು.