ಹಿರಿಯ ಛಾಯಾಗ್ರಾಹಕ ರಾಘವ ಪದ್ಮಶಾಲಿಗೆ ಗೌರವಾರ್ಪಣೆ
(ಸುದ್ದಿಕಿರಣ ವರದಿ)
ಉಡುಪಿ: ವಿಶ್ವ ಛಾಯಾಗ್ರಹಣ ದಿನ ಅಂಗವಾಗಿ ಜಯಂಟ್ಸ್ ಗ್ರೂಪ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸುಮಾರು 6 ದಶಕಗಳಿಂದ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಛಾಯಾಗ್ರಾಹಕ, ಚೇತನಾ ಸ್ಟುಡಿಯೊ ಮಾಲಕ ರಾಘವ ಪದ್ಮಶಾಲಿ ಅವರನ್ನು ಗೌರವಿಸಲಾಯಿತು.
ಜಯಂಟ್ಸ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ ಅಮೀನ್, ಜಯಂಟ್ಸ್ ವಲಯ ನಿರ್ದೇಶಕ ಪತ್ರಿಕಾ ಛಾಯಾಗ್ರಾಹಕ ದೇವದಾಸ ಕಾಮತ್, ಅಧ್ಯಕ್ಷ ಲಕ್ಷ್ಮೀಕಾಂತ ಬೆಸ್ಕೂರ್, ಕಾರ್ಯದರ್ಶಿ ಯಶವಂತ ಸಾಲಿಯಾನ್, ರೋಹಿಣಿ ಪದ್ಮಶಾಲಿ, ಸತೀಶ್ ಅಲೆವೂರು ಇದ್ದರು.