ರೈಲ್ವೆ ಫ್ಲಾಟ್ ಫಾರಂ ಶೆಲ್ಟರ್ ಉದ್ಘಾಟನೆ
(ಸುದ್ದಿಕಿರಣ ವರದಿ)
ಉಡುಪಿ: ಇಂದ್ರಾಳಿಯ ಉಡುಪಿ ರೈಲು ನಿಲ್ದಾಣದಲ್ಲಿ ಉಡುಪಿ ಲಯನ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾದ ಫ್ಲ್ಯಾಟ್ ಫಾರಂ ಶೆಲ್ಡರ್ ನ್ನು ಈಚೆಗೆ ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ನಿರ್ದೇಶಕ ವಂಶಿಧರ್ ಬಾಬು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ವಿಶ್ವನಾಥ ಶೆಟ್ಟಿ, ಅಂತಾರಾಷ್ಟ್ರೀಯ ಮಾಜಿ ನಿರ್ದೇಶಕ ವಿ. ವಿ. ಕೃಷ್ಣಾ ರೆಡ್ಡಿ, ಕೆ. ಸಿ. ವೀರಭದ್ರಪ್ಪ, ಮಾಜಿ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ ಇಂದ್ರಾಳಿ, ಜಿಲ್ಲಾ ಖಜಾಂಚಿ ಜಯಪ್ರಕಾಶ್ ಭಂಡಾರಿ, ಪ್ರಕಾಶ್ ಭಂಡಾರಿ ಮೊದಲಾದವರಿದ್ದರು.
ಕೊಂಕಣ ರೈಲ್ವೆ ಮಂಗಳೂರು ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಸ್ವಾಗತಿಸಿ, ವಿಭಾಗ ಇಂಜಿನಿಯರ್ ಬಿ. ಎಂ. ವೆಂಕಟೇಶ್ ವಂದಿಸಿದರು. ಹರೀಶ್ ಪೂಜಾರಿ, ಸುಧೀರ್ ಶೆಟ್ಟಿ ಇದ್ದರು.