ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಆಡಳಿತ ಮಂಡಳಿ ಸಭೆ ಈಚೆಗೆ ಸಂಸ್ಥೆ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ರೆಡ್ ಕ್ರಾಸ್ ಭವನದಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಜಿ. ಜಗದೀಶ್ ಸೂಚನೆ ಮೇರೆಗೆ ನೂತನ
ಕಾರ್ಯದರ್ಶಿ ಹಾಗೂ ಖಜಾಂಚಿ ಆಯ್ಕೆ ಪ್ರಕ್ರಿಯೆ ನಡೆಯಿತು. ಕಾರ್ಯದರ್ಶಿಯಾಗಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ ಹಾಗೂ ಖಜಾಂಚಿಯಾಗಿ ಡಾ. ಅರವಿಂದ ನಾಯಕ್ ಅಮ್ಮುಂಜೆ ಹಾಗೂ ಉಪಸಭಾಪತಿಯಾಗಿ ಡಾ. ಅಶೋಕ್ ಕುಮಾರ್ ವೈ. ಜಿ. ಆಯ್ಕೆಯಾದರು.
ಜಿಲ್ಲಾ ದಿವ್ಯಾಂಗರ ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯದರ್ಶಿಯಾಗಿ ಕೆ. ಸನ್ಮತ್ ಹೆಗ್ಡೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಸಮಿತಿ ನಿರ್ದೇಶಕಿಯಾಗಿ ರಮಾದೇವಿ ಮತ್ತು ಡಿ.ಡಿ.ಆರ್.ಸಿ ಸಮಿತಿ ನಿರ್ದೇಶಕರಾಗಿ ಡಾ. ರಾಮಚಂದ್ರ ಕಾಮತ್ ಆಯ್ಕೆಯಾದರು.
ಇತರ ಉಪ ಸಮಿತಿಗಳನ್ನು ಈ ಹಿಂದಿನಂತೆ ಮುಂದುವರಿಸುವಂತೆ ನಿರ್ಣಯಿಸಲಾಯಿತು
ಭಾರತೀಯ ರೆಡ್ ಕ್ರಾಸ್ ಉಡುಪಿ ಘಟಕಕ್ಕೆ ನೂತನ ಸಾರಥ್ಯ
ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...