Monday, July 4, 2022
Home ಸಮಾಚಾರ ಸಂಘಸಂಗತಿ ಸಮಾಜಸೇವೆಯಿಂದ ಬದುಕು ಅರ್ಥಪೂರ್ಣ

ಸಮಾಜಸೇವೆಯಿಂದ ಬದುಕು ಅರ್ಥಪೂರ್ಣ

ಮೂಲ್ಕಿ: ಸಮಾಜದ ಒಳಿತಿಗಾಗಿ ಏನಾದರೂ ಕೊಡುಗೆಯನ್ನು ನೀಡಬೇಕಾದಲ್ಲಿ ಸಮಾಜದ ಅಭಿವೃದ್ಧಿಗೆ ಸೇವೆ ಮಾಡಬೇಕೆನ್ನುವ ಆಸಕ್ತಿ ನಮ್ಮಲ್ಲಿರಬೇಕು. ಸಮಾಜಸೇವೆಯಿಂದ ನಮ್ಮ ಜೀವನ ಖಂಡಿತವಾಗಿಯೂ ಹೆಚ್ಚು ಅರ್ಥಪೂರ್ಣವಾಗಿರುತ್ತದೆ ಎಂದು ಪುನರೂರು ಪ್ರತಿಷ್ಠಾನ ಗೌರವಾಧ್ಯಕ್ಷ ಹಾಗೂ ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಭಿಪ್ರಾಯ ವ್ಯಕ್ತಪಡಿಸಿದರು.

ಈಚೆಗೆ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನ ಸಭಾಂಗಣದಲ್ಲಿ ನಡೆದ ಪುನರೂರು ಪ್ರತಿಷ್ಠಾನ ಅಂಗಸಂಸ್ಥೆ ಮೂಲ್ಕಿ ಜನವಿಕಾಸ ಸಮಿತಿಯ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೂಲ್ಕಿ ಜನವಿಕಾಸ ಸಮಿತಿ ನೂತನ ಅಧ್ಯಕ್ಷ ಪ್ರಾಣೇಶ್ ಭಟ್ ದೇಂದಡ್ಕ ಹಾಗೂ ಪ್ರಧಾನ ಕಾರ್ಯದರ್ಶಿ ದಾಮೋದರ ಶೆಟ್ಟಿ ಕೊಡೆತ್ತೂರು ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.

ಪುನರೂರು ಪ್ರತಿಷ್ಠಾನ ಅಧ್ಯಕ್ಷ ದೇವಪ್ರಸಾದ್ ಪುನರೂರು ಅಧ್ಯಕ್ಷತೆ ವಹಿಸಿದ್ದರು.

ದೇವಸ್ಥಾನದ ಅರ್ಚಕ ಗುರುಮೂರ್ತಿ ರಾವ್, ಪುನರೂರು ಪ್ರತಿಷ್ಠಾನ ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಜನವಿಕಾಸ ಸಮಿತಿ ಮೂಲ್ಕಿ ಉಪಾಧ್ಯಕ್ಷೆ ಶೋಭಾ ರಾವ್, ಕಾರ್ಯದರ್ಶಿ ಶಶಿಕರ ಕೆರೆಕಾಡು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ. ಎಸ್. ಸುರೇಶ ರಾವ್, ಗೀತಾ ಶೆಟ್ಟಿ, ಭಾಗ್ಯ ರಾಜೇಶ್, ಜೀವನ್ ಶೆಟ್ಟಿ ಮತ್ತು ಆನಂದ ಮೇಲಾಂಟ ಇದ್ದರು.

ಜಿತೇಂದ್ರ ವಿ. ರಾವ್ ಹೆಜಮಾಡಿ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!