Saturday, July 2, 2022
Home ಸಮಾಚಾರ ಸಂಘಸಂಗತಿ ಅನ್ಯರು ಅಭಿಮಾನಪಟ್ಟಾಗ ನಮ್ಮ ಸಾಧನೆಯ ಸಾರ್ಥಕತೆ

ಅನ್ಯರು ಅಭಿಮಾನಪಟ್ಟಾಗ ನಮ್ಮ ಸಾಧನೆಯ ಸಾರ್ಥಕತೆ

ಬ್ರಹ್ಮಾವರ: ನಮ್ಮ ಸಾಧನೆಯ ಬಗ್ಗೆ ನಾವೇ ಅಭಿಮಾನಪಟ್ಟರೆ ಸಂತಸವೆನಿಸುತ್ತದೆ. ಆದರೆ, ಸಾರ್ಥಕವೆನಿಸುವುದು ಇನ್ನೊಬ್ಬರು ಅಭಿಮಾನಪಟ್ಟಾಗ ಮಾತ್ರ ಎಂದು ಅಂಚೆ ಇಲಾಖೆ ಉದ್ಯೋಗಿ ಪೂರ್ಣಿಮಾ ಜನಾರ್ಧನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಹಂದಾಡಿ ಶಾಂತಿಮತೀ ಪ್ರತಿಷ್ಠಾನ ಆಯೋಜಿಸಿದ್ದ ಸಾಧಕರೆಡೆ ನಮ್ಮ ನಡೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಸುಪ್ತ ಪ್ರತಿಭೆ ಇದ್ದು, ಅದಕ್ಕೊಂದು ಸೂಕ್ತ ವೇದಿಕೆ ದೊರೆತಾಗ ಆ ಪ್ರತಿಭೆ ಪ್ರಕಟವಾಗುತ್ತದೆ ಎಂದರು.

ಶಾಂತಿಮತೀ ಪ್ರತಿಷ್ಠಾನದ ವಿಜಯ ಮಂಜ ಮಾತನಾಡಿ, ಸಮಾಜದಲ್ಲಿ ಸ್ತ್ರೀಗೆ ವಿಶಿಷ್ಟ ಸ್ಥಾನವಿದೆ. ಮನೆ, ಸಮುದಾಯ, ಸಮಾಜ ಇವೆಲ್ಲವನ್ನೂ ನಿಭಾಯಿಸಿಕೊಂಡು ಹೋಗುವ ಪರಿ ಅದ್ಭುತ ಎಂದರು.

ಉಡುಪ ರತ್ನ ಪ್ರತಿಷ್ಠಾನ ಸಂಚಾಲಕ ಜನಾರ್ದನ ಕೊಡವೂರು ಸ್ವಾಗತಿಸಿದರು. ಶಾಂತಿಮತೀ ಪ್ರತಿಷ್ಠಾನ ಅಧ್ಯಕ್ಷ ದಯಾನಂದ ವಾರಂಬಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ತಾ. ಪಂ. ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಯಶೋದಾ ಹೊಳ್ಳ ಶುಭಾಶಂಸನೆಗೈದರು. ಉಮೇಶ್ ಬಾಯರಿ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!