Thursday, July 7, 2022
Home ಸಮಾಚಾರ ಸಂಘಸಂಗತಿ ಶ್ರೀಕೃಷ್ಣ ಬಾಲನಿಕೇತನ ಇಂಟರ್ಯಾಕ್ಟ್ ಕ್ಲಬ್ ಪದ ಪ್ರದಾನ

ಶ್ರೀಕೃಷ್ಣ ಬಾಲನಿಕೇತನ ಇಂಟರ್ಯಾಕ್ಟ್ ಕ್ಲಬ್ ಪದ ಪ್ರದಾನ

ಶ್ರೀಕೃಷ್ಣ ಬಾಲನಿಕೇತನ ಇಂಟರ್ಯಾಕ್ಟ್ ಕ್ಲಬ್ ಪದ ಪ್ರದಾನ

(ಸುದ್ದಿಕಿರಣ ವರದಿ)
ಉಡುಪಿ: ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನ ಇಂಟರಾಕ್ಟ್ ಕ್ಲಬ್ ಪದ ಪ್ರದಾನ ಈಚೆಗೆ ನಡೆದಿದ್ದು, ರೋಟರಿ ಉಡುಪಿ ಅಧ್ಯಕ್ಷ ಹೇಮಂತ್ ಕಾಂತ್ ನೆರವೇರಿಸಿದರು.

ಕಳೆದ ವರ್ಷದಲ್ಲಿ ರಂಜಿತಾ ಮತ್ತು ತಂಡದವರು ಉತ್ತಮ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ಅಭಿನಂದಿಸಿ, ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಮತ್ತು ತಂಡಕ್ಕೆ ಶುಭ ಹಾರೈಸಿದರು. ರೋಟರಿಯ ಸಂಪೂರ್ಣ ಸಹಕಾರದ ಭರವಸೆ ನೀಡಿದರು.

ಸುಜಾತ ಗತ ವರ್ಷದ ವರದಿ ಮಂಡಿಸಿದರು.

ಮುಖ್ಯ ಅತಿಥಿ, ಸಹಾಯಕ ಗವರ್ನರ್ ಡಾ. ಸುರೇಶ್ ಶೆಣೈ ಕಳೆದ ವರ್ಷ ಚಟುವಟಿಕೆಗಳ ಬಗ್ಗೆ ಅಭಿನಂದಿಸಿ ಶುಭ ಹಾರೈಸಿದರು.

ರೋಟರಿ ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ವಂದಿಸಿದರು. ರಾಮಚಂದ್ರ ಉಪಾಧ್ಯಾಯ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!