Saturday, July 2, 2022
Home ಸಮಾಚಾರ ಸಂಘಸಂಗತಿ ಕತಾರ್ ಭಾರತೀಯ ಸಾಂಸ್ಕೃತಿಕ ಕೇಂದ್ರ: ಹೆಬ್ಬಾಗಿಲು ಸುಬ್ರಹ್ಮಣ್ಯ ಅವಿರೋಧ ಆಯ್ಕೆ

ಕತಾರ್ ಭಾರತೀಯ ಸಾಂಸ್ಕೃತಿಕ ಕೇಂದ್ರ: ಹೆಬ್ಬಾಗಿಲು ಸುಬ್ರಹ್ಮಣ್ಯ ಅವಿರೋಧ ಆಯ್ಕೆ

ಕತಾರ್: ಇಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಸಮಿತಿ ಚುನಾವಣೆಯಲ್ಲಿ ಬೈಂದೂರು ಮೂಲದ ಸುಬ್ರಹ್ಮಣ್ಯ ಹೆಬ್ಬಾಗಿಲು ಅತಿ ಹೆಚ್ಚು ಮತ ಪಡೆದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದಿನ 2 ವರ್ಷ ಅವಧಿಗೆ ಸುಬ್ರಹ್ಮಣ್ಯ ಆಯ್ಕೆಯಾಗುವ ಮೂಲಕ ಸಾಂಸ್ಕೃತಿಕ ಕೇಂದ್ರದ ಹೆಬ್ಬಾಗಿಲಾಗಿ ಮೂಡಿಬಂದಿದ್ದಾರೆ.

ಸುಬ್ರಹ್ಮಣ್ಯ ಅವರು ಕಳೆದ ಒಂದು ದಶಕದಿಂದ ಕತಾರಿನಲ್ಲಿ ನೆಲೆಸಿರುವ ಭಾರತೀಯರಿಗೆ ಸಾಮಾಜಿಕ ಹಾಗೂ ಆರ್ಥಿಕ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಅವರು ಸಲ್ಲಿಸಿದ ಸೇವೆ ಅನ್ಯಾದೃಶವಾದದ್ದು.

ಈ ಚುನಾವಣೆಗೆಂದೇ ಸಿದ್ಧಪಡಿಸಲಾದ ಡಿಜಿಪೋಲ್ ತಂತ್ರಾಂಶ (ಮೊಬೈಲ್ ಆ್ಯಪ್) ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಗಿತ್ತು. ಪ್ರತಿಯೋರ್ವ ಸದಸ್ಯರೂ ಚುನಾವಣೆಯಲ್ಲಿ ಭಾಗವಹಿಸಬೇಕೆಂಬ ಆಶಯದಿಂದ ಎಲ್ಲರ ಜಂಗಮವಾಣಿ (ಮೊಬೈಲ್)ಗಳಲ್ಲಿ ಈ ಆ್ಯಪ್ ಅಳವಡಿಸಲಾಗಿತ್ತು. ಸುಮಾರು 90 ಶೇ.ದಷ್ಟು ಸದಸ್ಯರು ಮತ ಚಲಾಯಿಸಿದ್ದರು.

ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಈ ಹಿಂದೆ ಭಾರತೀಯ ಸಮುದಾಯ ಹಿತೈಷಿ ವೇದಿಕೆ (ಐ.ಸಿ.ಬಿ.ಎಫ್.) ಆಡಳಿತ ಸಮಿತಿ ಜಂಟಿ ಕಾರ್ಯದರ್ಶಿಯಾಗಿ, ಅದಕ್ಕೂ ಪೂರ್ವದಲ್ಲಿ ಕರ್ನಾಟಕ ಸಂಘ ಕತಾರಿನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!