Thursday, July 7, 2022
Home ಸಮಾಚಾರ ಸಂಘಸಂಗತಿ ನನ್ನ ಬೀಚ್ ಸ್ವಚ್ಛ ಬೀಚ್ ಅಭಿಯಾನ

ನನ್ನ ಬೀಚ್ ಸ್ವಚ್ಛ ಬೀಚ್ ಅಭಿಯಾನ

ಉಡುಪಿ: ಸ್ವರ್ಣಾರಾಧನಾ ಅಭಿಯಾನ ಅಂಗವಾಗಿ ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ನಿರ್ಮಲ್ ತೋನ್ಸೆ ನೇತೃತ್ವದಲ್ಲಿ ಸೌತ್ ಕೆನರಾ ಫೊಟೊಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ, ತೋನ್ಸೆ ಗ್ರಾಮ ಪಂಚಾಯತ್, ಉಡುಪ ರತ್ನ ಪ್ರತಿಷ್ಠಾನ ಕೊಡವೂರು, ಜಯಂಟ್ಸ್ ಉಡುಪಿ ಬ್ರಹ್ಮಾವರ, ಬ್ಲಾಕ್ ಹಾಕ್ ರೈಡರ್ಸ್ ಉಡುಪಿ, ಹಳೆ ವಿದ್ಯಾಥರ್ಿ ಸಂಘ ಸ.ಪ.ಪೂ ಕಾಲೇಜು ಕೆಮ್ಮಣ್ಣು, ಲಯನ್ಸ್ ಕ್ಲಬ್ ಕಲ್ಯಾಣಪುರ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ, ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಸಂಯುಕ್ತಾಶ್ರಯದಲ್ಲಿ ಹೂಡೆ ಕಡಲ ತೀರದಲ್ಲಿ ನನ್ನ ಬೀಚ್ ಸ್ವಚ್ಛ ಬೀಚ್ ಅಭಿಯಾನ ಭಾನುವಾರ ನಡೆಯಿತು.
ಸುಮಾರು 2 ಗಂಟೆ ಕಾಲ ಸ್ವಯಂಸೇವಕರು ಕಡಲ ತೀರದ ಒಂದು ಕಿ. ಮೀ. ವ್ಯಾಪ್ತಿಯನ್ನು ಸ್ವಚ್ಛಗೊಳಿಸಿ ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ಕಡಲ ತೀರದ ಸ್ವಚ್ಛತೆ ಕಾಪಾಡುವ ಬಗ್ಗೆ ಜಾಗೃತಿ ಮೂಡಿಸಿದರು. ಅಭಿಯಾನದಲ್ಲಿ ಸುಮಾರು 100 ಮಂದಿ ಸಕ್ರಿಯವಾಗಿ ಭಾಗವಹಿಸಿದ್ದರು.
ದೊಡ್ಡಣಗುಡ್ಡೆ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ, ಮಧುಸೂದನ ಹೇರೂರು, ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಡಾ. ಪ್ರಕಾಶ್ ಶೆಣೈ, ರೊನಾಲ್ಡ್ ಸುವಾರಿಸ್, ಉಪನ್ಯಾಸಕಿ ಜಯಶ್ರೀ ನಾಯಕ್, ಸಿದ್ಧರಾಜು ಚಿಕ್ಕಸ್ವಾಮಿ, ಸವಿತಾ ನೋಟಗಾರ್, ಸುಕೇಶ್ ಅಮೀನ್, ಡಾ. ಕೀರ್ತಿ ಪಾಲನ್, ಜಗದೀಶ್, ಶಿವ ಕೆ. ಅಮೀನ್, ದೇವದಾಸ ಕಾಮತ್, ಜಗದೀಶ್ ಶೆಟ್ಟಿ, ಉದಯ ನಾಯ್ಕ್, ರಂಜಿತ್ ಕೊಡವೂರು, ಗುರುರಾಜ್ ನಾಯಕ್, ಎಂ. ಎಸ್. ಖಾನ್, ವಿವೇಕ್, ನಾಗರಾಜ್ ಭಂಡಾರ್ಕಾರ್ ಮೊದಲಾದವರಿದ್ದರು.
ನಿರ್ಮಲ್ ತೋನ್ಸೆ ಅಧ್ಯಕ್ಷ ವೆಂಕಟೇಶ್ ಕುಂದರ್ ಸ್ವಾಗತಿಸಿ, ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು. ಪ್ರಭಾಕರ ಭಟ್ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್.ಕೆ.ಪಿ.ಎ ಮಾಧ್ಯಮ ವಕ್ತಾರ ಜನಾರ್ದನ ಕೊಡವೂರು ಪ್ರಸ್ತಾವನೆಗೈದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ನಿರೂಪಿಸಿದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!